ಅಸ್ಸಾಂ ನಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿಸ್ತರಣೆಯಿಲ್ಲ

ಅಸ್ಸಾಂ ನಲ್ಲಿ ಆಗಸ್ಟ್ 31 ರ ನಂತರ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (ಎ.ಎಫ್.ಎಸ್.ಪಿ.ಎ) ಯನ್ನು ವಿಸ್ತರಿಸದೇ ಇರಲು ಗೃಹ ವ್ಯವಹಾರಗಳ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ವಿಸ್ತರಿಸುವ ಆಯ್ಕೆ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಭದ್ರತಾ ಮೂಲಗಳು ಹೇಳಿವೆ. ರಾಜ್ಯದಲ್ಲಿ ಭದ್ರತೆಗೆ ಮುಪ್ಪು ಇರುವ ಪ್ರದೇಶಗಳಲ್ಲಿ ಅಗತ್ಯವೆನಿಸಿದರೆ ರಾಜ್ಯ ಸರ್ಕಾರವೇ ಎ.ಎಫ್.ಎಸ್.ಪಿ.ಎ ಯನ್ನು ಘೋಷಿಸಬಹುದು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಆಗಸ್ಟ್ 3 ರಂದು ನಡೆದ ಸಭೆಯಲ್ಲಿ ಪರಿಶೀಲಿಸಿದ ಗೃಹ ಸಚಿವಾಲಯ ಈ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ವಿಶೇಷ ಕಾಯ್ದೆಯನ್ನು ವಿಸ್ತರಿಸಲು ಬಯಸುತ್ತಿಲ್ಲ. ಕಳೆದ ಬಾರಿ ಅಸ್ಸಾಂ ಸರ್ಕಾರದ ಕೋರಿಕೆಯ ಮೇರೆಗೆ ಆಗಸ್ಟ್ 31 ರವರೆಗೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ವಿಸ್ತರಿಸಲಾಗಿತ್ತು.

Loading...
error: Content is protected !!