ಮೈಕ್ರೋಮ್ಯಾಕ್ಸ್ ನಿಂದ ಕ್ಯಾನ್ವಾಸ್-1 ಸ್ಮಾರ್ಟ್ ಫೋನ್, ಬೆಲೆ ರೂ.6,999

ಭಾರತದ ಮೊಬೈಲ್ ತಯರಿಕಾ ಸಂಸ್ಥೆ ಮೈಕ್ರೋಮ್ಯಾಕ್ಸ್, ಕ್ಯಾನ್ವಾಸ್ ಸರಣಿಯಲ್ಲಿ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಕ್ಯಾನ್ವಾಸ್-1 ಹೆಸರಿನಲ್ಲಿ ಬಿಡುಗಡೆಗೊಂಡ ಸ್ಮಾರ್ಟ್ ಫೋನ್ ಮ್ಯಾಟ್ಟೆ ಬ್ಲಾಕ್ ಮತ್ತು ಕ್ರೋಮ್ ಬ್ಲಾಕ್ ಕಲರ್ ವೇರಿಯಂಟ್ ಗಳಲ್ಲಿ ದೇಶಾದ್ಯಂತ ರೀಟೇಲ್ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. 1 ವರ್ಷದ ವಾರೆಂಟಿಯೊಂದಿಗೆ ಹಾರ್ಡ್ವೇರ್ ಸಮಸ್ಯೆಗಳು ಎದುರಾದರೆ ಫೋನ್ ಖರೀದಿ ದಿನದಿಂದ 100 ದಿನಗಳೊಳಗೆ ಉಚಿತ ರಿಪ್ಲೇಸ್ಮೆಂಟ್ ಕೊಡುಗೆಯನ್ನೂ ಹೆಚ್ಚುವರಿಯಾಗಿ ಸಂಸ್ಥೆ ನೀಡುತ್ತಿದೆ. ಇದರ ಬೆಲೆ ರೂ.6,999.

5 ಇಂಚಿನ ಐಪಿಎಸ್ ಎಲ್ಸಿಡಿ ಡಿಸ್ಪ್ಲೇ (1280 x 720 ಪಿಕ್ಸಲ್ ಎಚ್ಡಿ ರೆಸೊಲ್ಯೂಶನ್), ಸ್ಕ್ರೀನ್ ರಕ್ಷಣೆಗಾಗಿ 2.5ಡಿ ಕರ್ವ್ಡ್ ಗ್ಲಾಸ್ ಹೊಂದಿರುವ ಈ ಸ್ಮಾರ್ಟ್ ಫೋನ್ 150 ಗ್ರಾಂ ತೂಕವಿದೆ. 1.3 GHz ಕ್ವಾಡ್ಕೋರ್ ಮೀಡಿಯಾ ಟೆಕ್ MT6737 SoC ಪ್ರೊಸೆಸರ್, 2 ಜಿಬಿ ರ್ಯಾಮ್, 16 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. 64 ಜಿಬಿವರೆಗೂ ವಿಸ್ತರಿಸಬಹುದಾಗಿದೆ.

ಆಂಡ್ರಾಯ್ಡ್ ನೌಗಟ್ 7.0 ಆಪರೇಟಿಂಗ್ ಸಿಸ್ಟಂ ನಿಂದ ಕಾರ್ಯನಿರ್ವಹಿಸುವ ಈ ಫೋನ್, ವೈಫೈ, ಬ್ಲೂಟೂಥ್, ಜಿಪಿಎಸ್/ಎ-ಜಿಪಿಎಸ್, 4ಜಿ ಎಲ್ಟಿಇ ಸಪೋರ್ಟ್, ಮೈಕ್ರೋ ಯುಎಸ್ಬಿ ಪೋರ್ಟ್, ಮೇಲ್ಭಾಗದಲ್ಲಿ 3.5ಎಂ.ಎಂ. ಹೆಡ್ ಫೋನ್ ಜಾಕ್ ಹೊಂದಿದೆ.

ಕ್ಯಾಮೆರಾ ವಿಷಯಕ್ಕೆ ಬರುವುದಾದರೆ, 8 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ, 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಉಳಿದಂತೆ 2500mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.