ಪೈಂಟ್ ಗೆ ಗುಡ್ ಬೈ ಹೇಳಲಿರುವ ಮೈಕ್ರೋಸಾಫ್ಟ್ – News Mirchi

ಪೈಂಟ್ ಗೆ ಗುಡ್ ಬೈ ಹೇಳಲಿರುವ ಮೈಕ್ರೋಸಾಫ್ಟ್

ವಿಂಡೋಸ್ ಆಪರೇಟಿಂಗ್ ಸಿಸ್ಟಂ ನಲ್ಲಿ ಇರುವ ಮೈಕ್ರೋಸಾಫ್ಟ್ “ಪೈಂಟ್” ಕುರಿತು ನಮ್ಮೆಲ್ಲರಿಗೂ ತಿಳಿದೇ ಇದೆ. ಕಂಪ್ಯೂಟರ್ ಕಲಿಯುವವರಿಗೆ ಇದರ ಬಗ್ಗೆ ಖಚಿತವಾಗಿ ತಿಳಿಸಿರುತ್ತಾರೆ. ಆದರೆ ಇನ್ನು ಮುಂದೆ ಬರುವ ವಿಂಡೋಸ್ ಆಪರೇಟಿಂಗ್ ಸಿಸ್ಟಂಗಳಲ್ಲಿ ಈ ಪೈಂಟ್ ಅಪ್ಲಿಕೇಷನ್ ಇರುವುದಿಲ್ಲವಂತೆ. ಈ ಕುರಿತು ಮೈಕ್ರೋಸಾಫ್ಟ್ ಸಂಸ್ಥೆ ಪ್ರಕಟಣೆ ನೀಡಿದೆ.

1985 ರಲ್ಲಿ ಮೊದಲ ಬಾರಿಗೆ ವಿಂಡೋಸ್ 1.0 ಆಪರೇಟಿಂಗ್ ಸಿಸ್ಟಂ ನಲ್ಲಿ ಪೈಂಟ್ ಸಾಫ್ಟ್‌ವೇರ್ ಅನ್ನು ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೂ ಈ ಸಾಫ್ಟ್‌ವೇರ್ ಅನ್ನು ಎಲ್ಲಾ ಆಪರೇಟಿಂಗ್ ಸಿಸ್ಟಂ ಗಳಲ್ಲಿ ಉಳಿಸಿಕೊಂಡು ಬರಲಾಗಿತ್ತು. ಆದರೆ ಇನ್ನು ಮುಂದಿನ ಒಎಸ್ ಗಳಲ್ಲಿ ಅದು ಕಾಣಿಸುವುದಿಲ್ಲ. ಅದರ ಬದಲಿಗೆ ಈಗಾಗಲೇ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ನಲ್ಲಿ ಪರಿಚಯಿಸಿರುವ ಪೈಂಟ್ 3ಡಿ ಮುಂದಿನ ಎಲ್ಲಾ ಒಎಸ್ ಗಳಲ್ಲಿ ಬಳಕೆಗೆ ಲಭ್ಯವಿರುತ್ತದೆ. 32 ವರ್ಷಗಳಿಂದ ಪೈಂಟ್ ಸೇವೆ ಬಳಸಿಕೊಂಡ ಬಳಕೆದಾರರಿಗೆ ನಿರಾಸೆಯಂತೂ ಖಚಿತ.

Loading...