ಮೈಕ್ರೋಸಾಫ್ಟ್ ನಲ್ಲಿ 700 ಉದ್ಯೋಗಗಳ ಕಡಿತ?

ಅಂತರಾಷ್ಟ್ರೀಯ ಟೆಕ್ ದಿಗ್ಗಜ ಮೈಕ್ರೋಸಾಪ್ಟ್ ಇನ್ನು ಕೆಲ ದಿನಗಳಲ್ಲಿ 700 ಉದ್ಯೋಗಿಗಳನ್ನು ತೆಗೆದು ಹಾಕಲಿದೆ. 2017 ರ ಜೂನ್ ವೇಳೆಗೆ 2,950 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಈ ಹಿಂದೆಯೇ ಮೈಕ್ರೋಸಾಫ್ಟ್ ಪ್ರಕಟಿಸಿತ್ತು. ಇದೀಗ ಮುಂದಿನ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಣೆಯ ಸಂದರ್ಭದಲ್ಲಿ ಉದ್ಯೋಗ ಕಡಿತದ ಪ್ರಕಟಣೆ ಹೊರಬೀಳಲಿದೆ ಎನ್ನಲಾಗುತ್ತಿದೆ.

2016 ಜೂನ್ ವೇಳೆಗೆ ಮೈಕ್ರೋಸಾಫ್ಟ್ ನಲ್ಲಿ ಸುಮಾರು 1,14,000 ಉದ್ಯೋಗಿಗಳಿದ್ದರು. ಕಂಪನಿಯು ಡೆಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಜನವರಿ 26 ರಂದು ಪ್ರಕಟಿಸಲಿದೆ. ಥಾಮ್ಸನ್ ರಾಯ್ಟರ್ಸ್ ಅಂದಾಜಿನ ಪ್ರಕಾರ ಕಂಪನಿಯು 25.27 ಬಿಲಿಯನ್ ಡಾಲರ್ ಆದಾಯ ಗಳಿಸುತ್ತದೆಯಂತೆ.

2013 ರಲ್ಲಿ ನೋಕಿಯಾ ಖರೀದಿಸಿದ ನಂತರ ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 25 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ತೆಗೆದುಹಾಕಿತ್ತು. ವಿವಿಧ ಘಟಕಗಳಲ್ಲಿ ಕೌಶಲ್ಯ ವೃದ್ಧಿಗಾಗಿಯೇ ಈ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಬ್ಯುಸಿನೆಸ್ ಇನ್ಸೈಡರ್ ವರದಿ ಮಾಡಿದೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache