ಯೋಗಿಯೊಂದಿಗೆ ಬಿಲ್ ಗೇಟ್ಸ್ ಭೇಟಿ – News Mirchi

ಯೋಗಿಯೊಂದಿಗೆ ಬಿಲ್ ಗೇಟ್ಸ್ ಭೇಟಿ

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಇಂದು(ಶುಕ್ರವಾರ) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು. ಲಖನೌದಲ್ಲಿನ ಮುಖ್ಯಮಂತ್ರಿ ಕಛೇರಿಯಲ್ಲಿ ಇಂದು ಬೆಳಗ್ಗೆ ಈ ಭೇಟಿ ನಡೆಯಿತು. ರಾಜ್ಯದಲಲ್ಇ ಮಿಲಿಂಡಾ ಗೇಟ್ಸ್ ಫೌಂಡೇಷನ್ ಆರಂಭಿಸಿದ ಕೆಲಸಗಳನ್ನು ಪರಿಶೀಲಿಸಲು ನಗರಕ್ಕೆ ಭೇಟಿ ನೀಡುತ್ತಿರುವ ಗೇಟ್ಸ್, ರಾಜ್ಯದ ಜನರಿಗೆ ಅನುಕೂಲವಾಗುವ ಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ ಫೆಬ್ರವರಿಯಲ್ಲಿ ನಡಯಲಿರುವ ಯು.ಪಿ ಗ್ಲೋಬಲ್ ಇನ್ವೆಸ್ಟರ್ಸ್ ಸಮ್ಮಿಟ್ ಗೆ ಬಿಲ್ ಗೇಟ್ಸ್ ಅವರನ್ನೂ ಕೂಡಾ ಆಹ್ವಾನಿಸಲಿದ್ದಾರೆ. ಮತ್ತೊಂದು ಕಡೆ ಆಂಧ್ರಪ್ರದೇಸದಲಲ್ಇ ನಡಯುತ್ತಿರುವ ಅಗ್ರಿಟೆಕ್ ಸಮಾವೇಶದಲ್ಲಿಯೂ ಬಿಲ್ ಗೇಟ್ ಭಾಷಣ ಮಾಡಲಿದ್ದಾರೆ. ಇಂದು ಮಧ್ಯಾಹ್ನ 2 – 4 ಗಂಟೆಗಳ ನಡುವೆ ಅವರು ಭಾಷಣ ಮಾಡಲಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...