ಮಾನವನ ಮೆದುಳು ವರ್ಧನೆಗೆ ಮೈಂಡ್ ರೀಡಿಂಗ್ ಕಂಪ್ಯೂಟರ್!

ಮಾನವನ ಮೆದುಳಿನ ಚಟುವಟಿಕೆಗಳನ್ನು ನಿಯಂತ್ರಿಸುವ ತಂತ್ರಜ್ಞಾನವು, ಕಷ್ಟಕರ ಮಾಹಿತಿಗಳನ್ನು ವಿಶ್ಲೇಷಿಸಲು ಮತ್ತು ನಿರ್ಣಾಯಕ ತೀರ್ಮಾನಗಳಿಗೆ ಬರಲು ಸಹಕಾರಿಯಾಗುತ್ತವೆಯಂತೆ.

ದೀರ್ಘಕಾಲದ ಏಕಾಗ್ರತೆಯಿಂದ ಯಾವುದೇ ಕೆಲಸವನ್ನು ಸುರಕ್ಷಿತ ಮತ್ತು ನಿಖರವಾಗಿ ಕಂಪ್ಯೂಟರ್ ಗಳ ನೆರವಿನಿಂದ ಮಾಡಬಹುದು ಎಂದು ಹಿರಿಯ ಸಂಶೋಧಕ ಡಾ. ಡೇವಿಡ್ ವಲೇರಿಯಾನಿ ಹೇಳಿದ್ದಾರೆ. ಮನುಷ್ಯರ ಪ್ರಯೋಜನಗಳಿಗಾಗಿ ನಾವು ನಮ್ಮ ಮಿತಿಗಳನ್ನು ದಾಟಿ ಈ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಅವರು ಹೇಳುವ ಪ್ರಕಾರ ಮುಂದಿನ ದಿನಗಳಲ್ಲಿ ನಮ್ಮ ತಲೆಗಳಲ್ಲೂ ಸೆನ್ಸಾರ್ ಗಳನ್ನು ನಾವು ಹೊಂದಬಹುದಂತೆ. ನಾವು ಧರಿಸುವ ಟೋಪಿ ಅಥವಾ ಇಯರ್ ಫೋನ್ ಮೂಲಕ ಈ ಸೆನ್ಸಾರ್ ಗಳನ್ನು ನಮ್ಮ ತಲೆಗೆ ಅಳವಡಿಸಿ, ಮೆದುಳು ಮತ್ತು ಉಪಕರಣದೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ನಮ್ಮ ಏಕಾಗ್ರತೆಯ ಮಟ್ಟವನ್ನು ತಿಳಿದುಕೊಳ್ಳಬಹುದಂತೆ.

ಕಾಣೆಯಾಗಿದ್ದ ಭಾರತದ ವಾಣಿಜ್ಯ ಹಡಗು ಸುರಕ್ಷಿತ: ಸುಷ್ಮಾ ಸ್ವರಾಜ್

ಈ ಸೆನ್ಸಾರ್ ಗಳು ನಾವು ಯಾವುದರ ಕಡೆ ಗಮನ ನೀಡುತ್ತಿಲ್ಲ ಎಂಬುದನ್ನೂ ನಮಗೆ ಸಲಹೆ ನೀಡಬಲ್ಲವಂತೆ. ಇದು ಗಂಟೆಗಟ್ಟಲೆ ರಸ್ತೆಯಲ್ಲಿ ವಾಹನ ಚಾಲನೆ ಮಾಡುವವರಿಗೆ ತುಂಬಾ ಅನುಕೂಲವಾಗಲಿದ್ದು, ರಸ್ತೆ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು.

ಎಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕವಾಗಿ “ಮೆದುಳು-ಕಂಪ್ಯೂಟರ್ ಇಂಟರ್ಫೇಸ್” ಅಥವಾ BCI(brain-computer interface) ಪ್ರಯೋಗವನ್ನು ಡೇವಿಡ್ ನಡೆಸಿದ್ದರಂತೆ. ಈ ಪ್ರಯೋಗದಲ್ಲಿ 64-ಲೀಡ್ ಎಲೆಕ್ಟ್ರೋಎನ್ಸೆಫಾಲೊಗ್ರಫಿ ಕ್ಯಾಪ್ (ಇಇಜಿ) ಮೂಲಕ ಕಂಪ್ಯೂಟರ್ ಡೇವಿಡ್ ಅವರ ಮೆದುಳಿನ ಚಟುವಟಿಕೆಯನ್ನು ನಿಯಂತ್ರಿಸಿತಂತೆ. ಅವರು ತಮ್ಮ ಕೈ ಕಾಲುಗಳ ಚಲನೆಗಳನ್ನು ಊಹಿಸಿಕೊಂಡರಂತೆ, ಈ ಮೂಲಕ ಗೇಮ್ ಒಂದರ ಅವತಾರ್ ಅನ್ನು ಕೀಬೋರ್ಡ್, ಯಾವುದೇ ಕಂಟ್ರೋಲರ್ ಇಲ್ಲದೆ ಕೇವಲ ಕಲ್ಪನೆಯಿಂದ ನಿಯಂತ್ರಿಸಲು ಸಾಧ್ಯವಾಯಿತು ಎನ್ನುತ್ತಾರೆ.

ನಮಗೆ ಅರಿವೇ ಇಲ್ಲವೆಂದು ನಂಬಿದ ಮಾಹಿತಿಗಳನ್ನೂ ಪಡೆಯುವಂತ ಸಾಧ್ಯತೆಗಳನ್ನು BCI ಗಳು ಸೃಷ್ಟಿಸುತ್ತವೆಯಂತೆ. ಈ ಮೂಲಕ ನಾವು ಯಾವುದೇ ವ್ಯಕ್ತಿಯೊಬ್ಬರ ಮೆದುಳನ್ನು ಟ್ಯಾಪ್ ಮಾಡಬಹದು ಮತ್ತು ಏನು ನಡೆಯಿತು ಹಾಗು ಅವರ ನಿರ್ಧಿಷ್ಟ ಭಾವನೆಗಳನ್ನು ಗುರುತಿಸಬಹುದಂತೆ.

ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾಳಿ ನಡೆಸಿ ಖೈದಿಯೊಂದಿಗೆ ಪರಾರಿಯಾದ ಉಗ್ರರು

ಆದರೆ ಈ BCI ಗಳ ಮೂಲಕ ನಮ್ಮ ಚಿಂತನೆಗಳ ಮಾದರಿಗಳ ಮೇಲೆ ನಿಯಂತ್ರಣ ಹೊಂದುವುದು ನಮ್ಮ ಖಾಸಗೀತನ ಮತ್ತು ಐಡೆಂಟಿಗೆ ಭಂಗ ಉಂಟು ಮಾಡಬಹುದು ಎಂದು ಬಯೋ ಎತಿಕ್ಸ್ ತಜ್ಞರಾದ ಡಾ. ಸರಾ ಚಾನ್ ಅವರು ಹೇಳುತ್ತಾರೆ. ನಾವು ಮಾನವ ಜೀವಿಗಳು, ನಾವು ಜೈವಿಕ, ಆದರೆ ಹೀಗೆ ಇದ್ದಕ್ಕಿದ್ದಂತೆ ಯಂತ್ರಗಳೊಂದಿಗ ಸಂಪರ್ಕ ಹೊಂದುತ್ತಿದ್ದೇವೆ ಎನ್ನುತ್ತಾರೆ.

Get Latest updates on WhatsApp. Send ‘Subscribe’ to 8550851559