ಗಡಿಯಲ್ಲಿ ರಕ್ಷಣಾ ಸಚಿವೆ – News Mirchi

ಗಡಿಯಲ್ಲಿ ರಕ್ಷಣಾ ಸಚಿವೆ

ಕಾಶ್ಮೀರದಲ್ಲಿ ಭಾರತ-ಪಾಕ್ ನಿಯಂತ್ರಣ ರೇಖೆಯುದ್ದಕ್ಕೂ ಬಿಎಸ್ಎಫ್ ಯೋಧರು ಕಾರ್ಯನಿರತರಾಗಿರುವ ಭಾರತ ಫಾರ್ವಾರ್ಡ್ ಪೋಸ್ಟ್ ಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನಿಡಿದರು. ನಿಯಂತ್ರಣ ರೇಖೆಯಿಂದ ಒಳನುಸುಳುವ ಉಗ್ರರ ಯತ್ನಗಳನ್ನು ಯಶಸ್ವಿಯಾಗಿ ತಡೆದ ಘಟನೆಗಳನ್ನು ಸೇನಾಧಿಕಾರಿಗಳು ಅವರಿಗೆ ವಿವರಿಸಿದರು. ರಕ್ಷಣಾ ಸಚಿವೆಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಬಾರಿಗೆ ಜಮ್ಮೂ ಕಾಶ್ಮೀರದಲ್ಲಿ ಅವರು ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅವರು ನೇರವಾಗಿ ಕುಪ್ವಾರಾ ಸೆಕ್ಟಾರ್ ನಲ್ಲಿನ ಗಡಿಯಲ್ಲಿ ಪೋಸ್ಟ್ ಗಳಿಗೆ ಭೇಟಿ ನೀಡಿದರು.

ಬಾದಾಮಿ ಬಾಗ್ ಕಂಟೋನ್ಮೆಂಟ್ ನಲ್ಲಿ ಉಗ್ರರ ಒಳನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸದ ರೀತಿ, ಉಗ್ರನಿಗ್ರಹ ಕ್ರಮಗಳನ್ನು ಆರ್ಮಿ ಕಮಾಂಡರ್ ಆಕೆಗೆ ವಿವರಿಸಿದರು ಎಂದು ರಕ್ಷಣಾ ಇಲಾಖೆ ಅಧಿಕೃತ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಪ್ರವಾಸದ ಭಾಗವಾಗಿ ಅವರು ಕಾಶ್ಮೀರ ಕಣಿವೆಯಲ್ಲಿನ ಗಡಿ ಪ್ರದೇಶಗಳು, ಲಡಾಖ್ ಪ್ರದೇಶದಲ್ಲಿನ ಪರಿಸ್ಥಿತಿಗಳನ್ನು ರಕ್ಷಣಾ ಸಚಿವೆ ಪರಿಶೀಲಿಸಲಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...