ಪಾಕ್ ಗೆಲುವಿಗೆ ಸಂಭ್ರಮ: ದೇಶದ್ರೋಹಿಗೆ ಗಂಭೀರ್ ಸಲಹೆ – News Mirchi

ಪಾಕ್ ಗೆಲುವಿಗೆ ಸಂಭ್ರಮ: ದೇಶದ್ರೋಹಿಗೆ ಗಂಭೀರ್ ಸಲಹೆ

ಟೀಮ್ ಇಂಡಿಯಾ ಹಿರಿಯ ಆಟಗಾರ ಗೌತಮ್ ಗಂಭೀರ್ ಮತ್ತೊಮ್ಮೆ ತಮ್ಮ ದೇಶಾಭಿಮಾನವನ್ನು ತೋರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಿದ್ದಕ್ಕೆ ಸಂಭ್ರಮಾಚರಣೆ ಮಾಡಬೇಕು ಎಂದು ಕರೆ ನೀಡಿದ ಕಾಶ್ಮೀರ ಪ್ರತ್ಯೇಕತಾವಾದಿ ಮಿರ್ವಾಯ್ಜ್ ಉಮರ್ ಫಾರೂಖ್ ಗೆ ಸರಿಯಾಗಿ ಬುದ್ದಿ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಸಂಭ್ರಮಾಚರಣೆ ಮಾಡಬೇಕೆಂದು ಗಂಭೀರ್ ಗಂಭೀರವಾಗಿ ಕುಟುಕಿದ್ದಾರೆ. [ಭಾರತಕ್ಕೆ ಹೀನಾಯ ಸೋಲು, ತೀವ್ರ ನಿರಾಸೆ ಮೂಡಿಸಿದ ಅಗ್ರ ಕ್ರಮಾಂಕದ ಆಟಗಾರರು]

ಪಾಕಿಸ್ತಾನ ತಂಡ ಟ್ರೋಫಿ ಗೆದ್ದಿದೆ, ಎಲ್ಲಾ ಕಡೆ ಪಟಾಕಿ ಸಿಡಿಸಿ, ಈದ್ ಹಬ್ಬ ಮುಂಚಿತವಾಗಿ ಬಂದಿದೆ. ಪಾಕ್ ಟೀಮ್ ಗೆ ಅಭಿನಂದನೆಗಳು ಎಂದು ಮಿರ್ವಾಯಿಜ್ ಟ್ವೀಟ್ ಮಾಡಿದ್ದ. ಇದಕ್ಕೆ ಗಂಭೀರ ತಮ್ಮ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಮಿರ್ವಾಯಿಜ್… ನೀವ್ಯಾಕೆ ಗಡಿ ದಾಟಿ ಹೋಗಬಾರದು? ಅಲ್ಲಿ ಚೀನಾದ ಉತ್ತಮ ಪಟಾಕಿ ಸಿಗುತ್ತದೆ. ರಂಜಾನ್ ಅನ್ನು ಪಾಕಿಸ್ತಾನದಲ್ಲಿ ಆಚರಣೆ ಮಾಡಿ. ಪ್ಯಾಕಿಂಗ್ ಗೆ ನಾನು ನಿಮಗೆ ಸಹಾಯ ಮಾಡುತ್ತೇನೆ” ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ಗಂಭೀರ್ ಪ್ರತಿಕ್ರಿಯೆ ಈಗ ವೈರಲ್ ಆಗಿದೆ.

ಅಂದ ಹಾಗೆ ಪಾಕ್ ಕ್ರಿಕೆಟ್ ತಂಡವನ್ನು ಮಿರ್ವಾಯಿಜ್ ಅಭಿನಂದಿಸುತ್ತಿರುವುದು ಇದೇ ಮೊದಲೇನಲ್ಲ. ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ನಲ್ಲಿ ಪಾಕಿಸ್ತಾನ ಗೆದ್ದಾಗಲೂ ಇದೇ ರೀತಿ ಆತ ಸ್ಪಂದಿಸಿದ್ದ. ಫೈನಲ್ ನಲ್ಲಿ ಭಾರತದ ವಿರುದ್ಧವೂ ಪಾಕ್ ಗೆಲುವು ಸಾಧಿಸಬೇಕೆಂದು ಹಾರೈಸಿದ್ದ.

Loading...