ಪರಮಾಣು ಕ್ಷಿಪಣಿ ಬರ್ತಿದೆ ಓಡಿ ಓಡಿ… ಬಚ್ಚಿಟ್ಟುಕೊಳ್ಳಿ.. ನಡುಗಿದ ಜಪಾನೀಯರು

ಓಡಿ ಓಡಿ ಉತ್ತರ ಕೊರಿಯಾದಿಂದ ಪರಮಾಣು ಕ್ಷಿಪಣಿ ಬರ್ತಿದೆಯಂತೆ, ಕಟ್ಟಡಗಳು, ಅಂಡರ್ ಗ್ರೌಂಡ್ ಗಳಲ್ಲಿ ಅಡಗಿ ಕೂತ್ಕೊಳ್ಳಿ…. ಹೀಗಂತ ಜಪಾನಿನಲ್ಲಿ ದೊಡ್ಡ ಕೂಗೆದ್ದಿತ್ತು… ಧ್ವನಿವರ್ಧಕಗಳ ಮೂಲಕ ಜನರನ್ನು ಎಚ್ಚರಿಸಲಾಯಿತು. ಇದು ಮತ್ತೊಮ್ಮೆ ಜಾಗತಿಕ ಎಚ್ಚರಿಕೆಗಳನ್ನೂ ಗಣನೆಗೆ ತೆಗೆದುಕೊಳ್ಳದೆ ಖಂಡಾಂತರ ಪರಮಾಣು ಕ್ಷಿಪಣಿಯನ್ನು ಪರೀಕ್ಷಿಸಿದಾಗ ಜಪಾನಿನ ಪ್ರಜೆಗಳು ವ್ಯಕ್ತಪಡಿಸಿದ ಆತಂಕಗಳು…

ಬೆಳಗ್ಗಿನಿಂದಲೇ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆಯಂತೆ ಎಂದು ತುರ್ತು ಫೋನ್ ಕರೆಗಳು ಮಾಡುವ ಮೂಲಕ, ಧ್ವನವರ್ಧಕ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಜಪಾನಿನ ಸುಮಾರು ಒಂದು ಮಿಲಿಯನ್ ಜನ ಮುಂಜಾನೆಯೇ ಈ ಸುದ್ದಿಗೆ ನಡುಗಿ ಹೋದರು. ಜಾಗತಿಕ ಎಚ್ಚರಿಕೆಗಳಿಗೆ ಬಗ್ಗೆ ಉತ್ತರ ಕೊರಿಯಾ ಮತ್ತೊಮ್ಮೆ ಖಂಡಾಂತ ಕ್ಷಿಪಣಿಯನ್ನು ಪ್ರಯೋಗಿಸಿತ್ತು. ಕ್ಷಿಪಣಿಯ ವ್ಯಾಪ್ತಿ 3,700 ಕಿ.ಮೀ. ಅಂದರೆ ಸರಿಯಾಗಿ ಅಮೆರಿಕದ ಭೂಭಾಗದ ಗ್ವಾಮ್ ಅನ್ನು ತಲುಪಿ ಧ್ವಂಸಗೊಳಿಸುವಷ್ಟು ದೂರ. ಆದರೆ ಇದೀಗ ಉತ್ತರ ಕೊರಿಯಾ ಕ್ಷಿಪಣಿಯನ್ನು ಜಪಾನ್ ಮೇಲೆ ಹಾದು ಹೋಗುವಂತೆ ಫೆಸಿಫಿಕ್ ನಲ್ಲಿ ಪ್ರಯೋಗಿಸಿದೆ.

ಹೀಗಾಗಿ ಅಲ್ಲಿನ ಜನ ಎಲ್ಲಿ ಕ್ಷಿಪಣಿ ತಮ್ಮ ಮೇಲೆ ಬೀಳುವುದೋ ಎಂದ ಆತಂಕಗೊಂಡಿರು. ಅವರ ಆತಂಕಗೊಂಡಂತೆ ಕ್ಷಿಪಣಿ ಬಿದ್ದಿದ್ದರೆ ಆಗು ಹಾನಿಯನ್ನು ಮಾತ್ರ ಕಲ್ಪಿಸಿಕೊಳ್ಳಲಾರದಷ್ಟು ಆಗುತ್ತಿತ್ತು. ಮುಖ್ಯವಾಗಿ ಎರಿಮೋ, ಹೊಕ್ಕೈಡೋನಂಹ ನಗರಗಳ ಜನ ಮಾತ್ರ ಜೀವ ಕೈಯಲ್ಲಿ ಹಿಡಿದುಕೊಂಡಿದ್ದರು. ಒಂದು ಬೃಹತ್ ಕ್ಷಿಪಣಿ ತಮ್ಮ ನಗರದ ಮೇಲೆ ಹಾದು ಹೋಗಲಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಒಂದೆಡೆ ನಿಲ್ಲಲಾರದಂತಾದರು. ಅದು ಕೇಳುವುದಕ್ಕೇ ತುಂಬಾ ಭಯಂಕರವಾಗಿದೆ ಎಂದು ಜಪಾನ್ ನಾಗರಿಕನೊಬ್ಬ ತನ್ನ ಆತಂಕವನ್ನು ವ್ಯಕ್ತಪಡಿಸಿದ್ದಾನೆ.

[ಇದನ್ನೂ ಓದಿ: ಉತ್ತರ ಕೊರಿಯಾಗೆ ಬುದ್ದಿ ಕಲಿಸ್ತೀರಾ ಇಲ್ವಾ? ಚೀನಾ ಮತ್ತು ರಷ್ಯಾ ವಿರುದ್ಧ ಅಮೆರಿಕಾ ಕಿಡಿ]

ನಿಜವಾಗಿಯೂ ನಾವು ಹೆದರಿದೆವು. ಅದು 2000 ಕಿ.ಮೀ ದೂರದಲ್ಲಿ ಫೆಸಿಫಿಕ್ ನಲ್ಲಿ ಬೀಳುತ್ತದೆ ಎಂದು ಕೇಳಲ್ಪಟ್ಟೆ ಸರಿಯಾಗಿ ಅದು ಹೋಗುವ ಮಾರ್ಗದಲ್ಲಿ ಬಿದ್ದರೆ ನನ್ನವು 16 ನೌಕೆಗಳಿವೆ. ಸರ್ಕಾರ ಕೂಡಾ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಎಚ್ಚರಿಸಿತು. ಆದರೆ ಆ ಸಮಯದಲ್ಲಿ ನಾವು ಅಸಹಾಯಕರಾಗಿದ್ದೆವು. ಈಗಾಗಲೇ ಎರಡು ಬಾರಿ ಹೀಗಾಗಿದೆ. ಇನ್ನು ಮುಂದೆ ನಮಗೆ ನಿಮ್ಮದಿ ಇರುವುದಿಲ್ಲವೇನೋ ಎಂದು ಮತ್ತೊಬ್ಬರು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559