ದೆಹಲಿ ತಲುಪಿದ ಕರಾಚಿಯಲ್ಲಿ ನಾಪತ್ತೆಯಾಗಿದ್ದ ಮುಸ್ಲಿಂ ಧರ್ಮಗುರುಗಳು – News Mirchi

ದೆಹಲಿ ತಲುಪಿದ ಕರಾಚಿಯಲ್ಲಿ ನಾಪತ್ತೆಯಾಗಿದ್ದ ಮುಸ್ಲಿಂ ಧರ್ಮಗುರುಗಳು

ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಧರ್ಮಗುರುಗಳು ಇಂದು ದೆಹಲಿ ತಲುಪಿದ್ದಾರೆ. ಈ ಇಬ್ಬರೂ ಧರ್ಮಗುರುಗಳು ಮಾರ್ಚ್14 ರಂದು ಕರಾಚಿಯಲ್ಲಿ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಪತ್ತೆಗಾಗಿ ಕೇಂದ್ರ ಸರ್ಕಾರ ಮುಂದಾಗಿತ್ತು. ಭಾರತೀಯ ಸೂಫಿ ಗುರುಗಳ ಎಲ್ಲಿದ್ದಾರೆಂದು ಹೇಳಬೇಕೆಂದು ವಿದೇಶಾಂಗ ಸಚಿವೆ ಪಾಕಿಸ್ತಾನಕ್ಕೆ ಮನವಿ ಮಾಡಿದ್ದರು. ದೆಹಲಿಯಲ್ಲಿನ ಹಜ್ರತ್ ನಿಜಾಮುದ್ದೀನ್ ದರ್ಗಾದ ಸಯ್ಯದ್ ಅಲಿ ನಿಜಾಮಿ, ಆತನ ಸೋದರಳಿಯ ನಾಜಿಮ್ ಅಲಿ ನಿಜಾಮಿ ಕರಾಚಿಯಿಂದ ನಾಪತ್ತೆಯಾಗಿದ್ದರು.

ಇವರಿಬ್ಬರೂ ಮಾರ್ಚ್ 13 ರಂದು ಲಾಹೋರಿನಲ್ಲಿರುವ ಬಾಬಾ ಫರೀದ್ ದರ್ಗಾದಲ್ಲಿ ಚಾದರ್ ಅರ್ಪಿಸಿದ್ದರು. ಮಾರನೆಯ ದಿನ ದಾಟಾ ದರ್ಬಾರ್ ಸೂಫಿ ದರ್ಗಾದಲ್ಲಿಯೂ ಚಾದರ್ ಅರ್ಪಿಸಿದ್ದರು. ಆದರೆ ಭಾರತಕ್ಕೆ ವಾಪಸಾಗಲು ಕರಾಚಿ ತಲುಪಿದ ನಂತರ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.

Loading...

Leave a Reply

Your email address will not be published.