ವೈದ್ಯರ ಅನುಪಸ್ಥಿತಿಯಲ್ಲಿ ಆಪರೇಷನ್ ಮಾಡಿ ಜೀವ ಉಳಿಸಿದ ಶಾಸಕ

ಮಿಜೋರಾಂ ರಾಜ್ಯದ ಶಾಸಕರೊಬ್ಬರು ಬುಧವಾರ ತಮ್ಮ ವಿಧಾನಸಭಾ ಕ್ಷೇತ್ರದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ ಶಭಾಶ್ ಎನ್ನಿಸಿಕೊಂಡಿದ್ದಾರೆ. ಸೈಹಾ ಜಿಲ್ಲೆಯ ಆಸ್ಪತ್ರೆಯಲ್ಲಿ ಸರ್ಜರಿ ಮಾಡಬೇಕಿದ್ದ ವೈದ್ಯರು ತರಬೇತಿಗಾಗಿ ಇಂಫಾಲ್ ಗೆ ಹೋಗಿದ್ದರು. ಅದೇ ಸಮಯದಲ್ಲಿ ಮಹಿಳೆಯೊಬ್ಬರು(35) ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ಬಂದರು. ಆದರೆ ಸಮಯಕ್ಕೆ ಸರ್ಜನ್ ಆಸ್ಪತ್ರೆಯಲ್ಲಿಲ್ಲ. ಇದನ್ನು ತಿಳಿದ ಶಾಸಕ ಡಾ. ಕೆ ಬೀಚುವಾ ಕೂಡಲೇ ಆಸ್ಪತ್ರೆಗೆ ಹೋಗಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಜೀವ ಉಳಿಸಿದ್ದಾ.ರೆ

ಮಹಿಳೆಯ ಹೊಟ್ಟೆಯಲ್ಲಿ ದೊಡ್ಡ ರಂದ್ರ ಉಂಟಾಗಿದ್ದು, ಆಪರೇಷನ್ ನಡೆಯದಿದ್ದರೆ ಆಕೆ ಜೀವ ಕಳೆದುಕೊಳ್ಳುತ್ತಿದ್ದಳು ಎಂದು ಶಾಸಕರು ಹೇಳಿದ್ದಾರೆ. ಗುರುವಾರ ಆಕೆಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾತನಾಡಿಸಿದರು. ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ ಎಂದು ಜಿಲ್ಲಾ ಅಭಿವೃದ್ಧಿ ಸಮಾವೇಶದಲ್ಲಿ ಶಾಸಕರು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಡೆಪ್ಯೂಟಿ ಕಮೀಷನರ್ ಹೇಳಿದ್ದಾರೆ. ಬೀಚುವಾ 2013ರಲ್ಲಿ ಸೈಹಾ ವಿಧಾನಸಭಾ ಕ್ಷೇತ್ರದಿಂದ ಮಿಜೋ ನ್ಯಾಷನಲ್ ಫ್ರಂಟ್(ಎಂಎನ್ಎಫ್) ನಿಂದ ಸ್ಪರ್ಧಿಸಿ ಗೆದಿದ್ದರು. 1991ರಲ್ಲಿ ಮೆಡಿಕಲ್ ಪದವಿ ಪೂರ್ಣಗೊಳಿಸಿದ ಬೀಚುವಾ, 20 ವರ್ಷಗಳ ಕಾಲ ವೈದ್ಯವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ಪತ್ನಿಯೂ ಕೂಡಾ ವೈದ್ಯರು.

Related News

Loading...

Leave a Reply

Your email address will not be published.

error: Content is protected !!