ಕಲಾಪಕ್ಕೆ ಚಕ್ಕರ್, ಸಮಾರಂಭದಲ್ಲಿ ಕುಣಿದು ಜನರ ಆಕ್ರೋಶಕ್ಕೆ ಗುರಿಯಾದ ಅಂಬರೀಶ್ – News Mirchi

ಕಲಾಪಕ್ಕೆ ಚಕ್ಕರ್, ಸಮಾರಂಭದಲ್ಲಿ ಕುಣಿದು ಜನರ ಆಕ್ರೋಶಕ್ಕೆ ಗುರಿಯಾದ ಅಂಬರೀಶ್

ಬೆಂಗಳೂರು: ಒಂದು ಕಡೆ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಕುರಿತು ಬೆಳಗಾವಿ ಸುವರ್ಣ ಸೌಧದಲ್ಲಿನ ನಡೆದ ವಿಧಾನಸಭೆ ಕಲಾಪವು ಎರಡನೇ ದಿನವೂ ಆರೋಪ, ಪ್ರತ್ಯಾರೋಪಗಳ ಗದ್ದಲದಲ್ಲಿ ಕೂಡಿದ್ದರೆ, ಮತ್ತೊಂದು ಕಡೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಆಡಳಿತ ಪಕ್ಷ ಕಾಂಗ್ರೆಸ್ ಶಾಸಕ, ನಟ ಅಂಬರೀಶ್ ಅವರು ಮಾತ್ರ ಕಲಾಪಕ್ಕೆ ಚಕ್ಕರ್ ಹಾಕಿ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದು ಚರ್ಚಾಸ್ಪದವಾಗಿದೆ.

ಗಣಪತಿ ಪ್ರಕರಣದ ಕುರಿತು ಕಲಾಪದಲ್ಲಿ ಚರ್ಚೆ ನಡೆಯಬೇಕು, ಸಿಬಿಐ 1 ನೇ ಆರೋಪಿಯಾಗಿ ಹೆಸರಿಸಿರುವ ಸಚಿವ ಕೆ.ಜೆ.ಜಾರ್ಜ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಂಗಳವಾರ ಎರಡನೇ ದಿನವೂ ಕೂಡಾ ಕಲಾಪದಲ್ಲಿ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ನಾಯಕರು ಒತ್ತಾಯ ಮಾಡಿದ್ದರು.

ಆದರೆ ಆಡಳಿತ ಪಕ್ಷ ಕಾಂಗ್ರೆಸ್ ನಾಯಕ ಅಂಬರೀಶ್ ಕಲಾಪಕ್ಕೆ ಅನಾರೋಗ್ಯದ ನೆಪವೊಡ್ಡಿ ಗೈರು ಹಾಜರಾಗಿದ್ದು, ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ವೇದಿಕೆಯಲ್ಲಿ ಕುಣಿಯುತ್ತಿರುವ ದೃಶ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬರೀಶ್ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಅವರ ಬೇಜವಾಬ್ದಾರಿತನಕ್ಕೆ ಟೀಕೆಗಳು ವ್ಯಕ್ತವಾಗುತ್ತಿವೆ. ಜನರ ಕಷ್ಟಗಳನ್ನು ನಿರ್ಲಕ್ಷಿಸಿ, ಕಲಾಪಗಳಿಗೆ ಹಾಜರಾಗದಿ ಸಮಾರಂಭಗಳಲ್ಲಿ ಕುಣಿಯುವುದು ಎಷ್ಟು ಸರಿ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!