ಪಳನಿಸ್ವಾಮಿ ಗುಂಪಿನ ಶಾಸಕರಿಗೆ ಕಹಿ ಅನುಭವ

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಗುಂಪುಗಳಿಗೆ ಸೇರಿದ ಶಾಸಕರು ಸೇರಿದಂತೆ ಪ್ರತಿಪಕ್ಷ ಡಿಎಂಕೆ ಶಾಸಕರು ವಿಧಾನಸಭೆಗೆ ತಲುಪಿದ್ದಾರೆ. ತಮಿಳುನಾಡು ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಪಳನಿಸ್ವಾಮಿ ಬಹುಮತ ಸಾಬೀತುಪಡಿಸಲಿದ್ದಾರೆ. ಕೆಲ ಹೊತ್ತಿನಲ್ಲಿ ಓಟಿಂಗ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಬಳಿ 2 ಸಾವಿರ ಜನ ಪೊಲೀಸ್ ಸಿಬ್ಬಂದಿಯೊಂದಿಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಪಡೆಗಳನ್ನು ಸಿದ್ಧವಾಗಿಟ್ಟಿದ್ದಾರೆ.

ಪಳನಿಸ್ವಾಮಿ ಗುಂಪಿನ ಶಾಸಕರಿಗೆ ಕಹಿ ಅನುಭವ:

ಇಂದು ಬೆಳಗ್ಗೆ ಗೋಲ್ಡನ್ ರೆಸಾರ್ಟ್ ನಿಂದ ತೆರಳಿದೆ ಪಳನಿಸ್ವಾಮಿ ಗುಂಪಿನ ಶಾಸಕರಿಗೆ ಕಹಿ ಅನುಭವ ಎದುರಾಯಿತು. ಚೆನ್ನೈನಲ್ಲಿ ಇಸಿಆರ್ ರಸ್ತೆಯಲ್ಲಿ ಅಣ್ಣಾಡಿಎಂಕೆ ಕಾರ್ಯಕರ್ತರು ಪಳನಿಸ್ವಾಮಿ ಗುಂಪಿನ ಶಾಸಕರಿಗೆ ತಡೆದು ಬಹುಮತ ಸಾಬೀತು ಸಮಯದಲ್ಲಿ ಪಳನಿಸ್ವಾಮಿಗೆ ವಿರುದ್ಧವಾಗಿ ಮತ ಹಾಕಬೇಕೆಂದು ಘೋಷಣೆ ಕೂಗಿ, ಅವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದರು. ಪೊಲೀಸರು ಶಾಸಕರನ್ನು ಸುರಕ್ಷಿತವಾಗಿ ವಿಧಾನಸಭೆಗೆ ತಲುಪಿಸಿದರು.

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache