ಇನ್ನೂ ಬಾರದ ಶಶಿಕಲಾ ಕ್ಯಾಂಪಿನ ಶಾಸಕರು… ಚಿಂತೆಗೀಡಾದ ಪನ್ನೀರ್ – News Mirchi
We are updating the website...

ಇನ್ನೂ ಬಾರದ ಶಶಿಕಲಾ ಕ್ಯಾಂಪಿನ ಶಾಸಕರು… ಚಿಂತೆಗೀಡಾದ ಪನ್ನೀರ್

ಶಶಿಕಲಾ ಶಿಬಿರದಿಂದ 11 ಜನ ಸಂಸದರು ತನ್ನ ಕ್ಯಾಂಪ್ ಗೆ ಹಾರಿ ಬಂದರೂ, ನಿರೀಕ್ಷಿಸಿದಷ್ಟು ಜನ ಶಾಸಕರು ಬಾರದಿದ್ದುದು ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಚಿಂತಾಕ್ರಾಂತರಾಗಿದ್ದಾರೆ. ಭಾನುವಾರದ ವೇಳೆಗೆ ಕನಿಷ್ಠ 25 ಶಾಸಕರು ತನ್ನ ಗುಂಪಿಗೆ ಸೇರಬಹುದು ಎಂದು ಅವರು ಭಾವಿಸಿದ್ದರು. ಆದರೆ ಸಚಿವ ಪಾಂಡ್ಯರಾಜನ್ ಹೊರತುಪಡಿಸಿ ಬೇರೆ ಯಾರೂ ಈಕಡೆ ತಲೆ ಹಾಕಿಲ್ಲ. ಹೀಗಾಗಿ ಶಶಿಕಲಾ ಶಿಬಿರದಲ್ಲಿನ ಶಾಸಕರಿಗೆ ಹೇಗೆ ಗಾಳ ಹಾಕಬೇಕೆಂದು ಪನ್ನೀರ್ ಗ್ಯಾಂಗ್ ಯೋಚಿಸುತ್ತಿದೆ.

ಶಾಸಕರನ್ನು ಇಟ್ಟಿರುವ ಪ್ರದೇಶ ಖಾಸಗಿಯಾದ್ದರಿಂದ ಸ್ವತಃ ಅಲ್ಲಿಗೆ ಹೋಗಿ ಅವರನ್ನು ಮಾತನಾಡಿಸಲು ಸೆಲ್ವಂ ಸಿದ್ಧರಾಗಿದ್ದರೆಂದು ವರದಿಗಳು ಹೇಳುತ್ತಿವೆ. ಆದರೆ ಪೊಲೀಸ್ ಅಧಿಕಾರಿಗಳ ಸಲಹೆಯ ಹಿನ್ನೆಲೆಯಲ್ಲಿ ಅವರು ಹಿಂದೇಟು ಹಾಕಿದ್ದಾರೆನ್ನಲಾಗಿದೆ. ಈ ವಿಷಯ ಶಶಿಕಲಾ ಕಿವಿಗೆ ಬೀಳುತ್ತಿದ್ದಂತೆ ಮತ್ತಷ್ಟು ಎಚ್ಚರಿಕೆ ವಹಿಸಿದ್ದಾರೆ. ರೆಸಾರ್ಟ್ ಸುತ್ತಲೂ ಭಾರೀ ಪ್ರಮಾಣದಲ್ಲಿ ಖಾಸಗಿ ಸಿಬ್ಬಂದಿಯನ್ನು ಕಾವಲಿಗಿಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಸಹಾ ಭಾರೀ ಬಂದೋ ಬಸ್ತ್ ಮಾಡಿದ್ದಾರೆ.

ಜಯಲಲಿತ ಸಮಾಧಿಗೆ ಭೇಟಿ ನೀಡಿದ ಬಳಿಕ ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ತೊಡೆ ತಟ್ಟಿದ್ದು, ಶಾಸಕರ ಬೆಂಬಲವನ್ನು ಪಡೆಯಲು ಅನೇಕ ತಂತ್ರಗಳನ್ನು ಹೂಡಿದರು. ಜನರು, ಪಕ್ಷದ ಕಾರ್ಯಕರ್ತರು, ನಾಯಕರು, ಸಿನಿಮಾ ಪ್ರಮುಖರ ಬೆಂಬಲ ಗಳಿಸಿದರು. ಆದರೆ ಭಾನುವಾರ ಸಂಜೆಯವರೆಗೂ ಆರು ಶಾಸಕರು ಮಾತ್ರ ಪನ್ನೀರ್ ಗೆ ಜೈಕಾರ ಹಾಕಿದರು. ಈಗ ಪನ್ನೀರ್ ಕ್ಯಾಂಪಿನಲ್ಲಿ ಅವರನ್ನೂ ಸೇರಿಸಿ ಏಳು ಶಾಸಕರು ಮಾತ್ರ ಇದ್ದಾರೆ. ಭಾನುವಾರ ಸಂಸದರು ಜಯಸಿಂಗ್ ತ್ಯಾಗರಾಜನ್, ಸೆಂಗುಟ್ಟುವನ್, ಮಾರುತಿರಾಜಾ, ರಾಜೇಂದ್ರನ್, ಲಕ್ಷ್ಮಣನ್, ಪಾರ್ಥೀಬನ್ ಪನ್ನೀರ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಇದುವರೆಗೂ 11 ಶಾಸಕರ ಬಲ ಪನ್ನೀರ್ ಗೆ ಸಿಕ್ಕಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!