ಎಲ್ಲಾ ಪಾಕಿಸ್ತಾನೀಯರನ್ನು ಒದ್ದೋಡಿಸಿ : ಎಂ.ಎನ್.ಎಸ್ |News Mirchi

ಎಲ್ಲಾ ಪಾಕಿಸ್ತಾನೀಯರನ್ನು ಒದ್ದೋಡಿಸಿ : ಎಂ.ಎನ್.ಎಸ್

ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾದವ್ ಅವರ ಮೇಲೆ ಭಾರತದ ಗೂಢಚಾರ ಎಂಬ ಆರೋಪ ಹೊರಿಸಿ ಗಲ್ಲು ಶಿಕ್ಷೆ ವಿಧಿಸಿರುವ ಪಾಕ್ ಕ್ರಮಕ್ಕೆ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕುಲಭೂಷಣ್ ಜಾದವ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡದಿದ್ದರೆ, ಭಾರತದಲ್ಲಿರುವ ಪಾಕಿಸ್ತಾನೀಯರನ್ನು ಅವರ ದೇಶಕ್ಕೆ ಒದ್ದೋಡಿಸಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಒತ್ತಾಯಿಸಿದೆ.

ಕುಲಭೂಷಣ್ ಜಾದವ್ ಅವರ ಕುಟುಂಬಕ್ಕೆ ನಾವು ಆಸರೆಯಾಗಿರುತ್ತೇವೆ, ಪಾಕ್ ಗೆ ಸೇರಿದ ಪ್ರಜೆಗಳು ಯಾರೇ ಇಲ್ಲಿ ಇದ್ದರೂ ಅವರನ್ನು ಪಾಕಿಸ್ತಾನಕ್ಕೆ ಒದ್ದು ಓಡಿಸುತ್ತಿರಬೇಕು, ಜಾದವ್ ಅವರನ್ನು ಪಾಕ್ ಬಿಡುವವರೆಗೂ ಹೀಗೆ ಮುಂದುವರೆಯುತ್ತಿರಬೇಕು ಎಂದು ಎಂ.ಎನ್.ಎಸ್ ಮುಖಂಡ ಸಂದೀಪ್ ದೇಶಪಾಂಡೆ ಹೇಳಿದ್ದಾರೆ.

ಇನ್ನು ಜಾದವ್ ಅವರಿಗೆ ಪಾಕ್ ಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಒಂದು ವೇಳೆ ಜಾದವ್ ಅವರಿಗೆ ಗಲ್ಲು ಶಿಕ್ಷೆ ಜಾರಿಯಾದರೆ, ಅದನ್ನು ಪೂರ್ವನಿರ್ಧಾರಿತ ಕೊಲೆ ಎಂದು ಪರಿಗಣಿಸುತ್ತೇವೆ ಎಂದು ಪಾಕ್ ಗೆ ಎಚ್ಚರಿಕೆ ನೀಡಿದ್ದಾರೆ. ಜಾದವ್ ಬಿಡುಗಡೆಗೆ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Loading...
loading...
error: Content is protected !!