ಏಕಕಾಲದಲ್ಲಿ ನಾಲ್ಕು ಯಶಸ್ವಿ ಆಪರೇಷನ್! – News Mirchi

ಏಕಕಾಲದಲ್ಲಿ ನಾಲ್ಕು ಯಶಸ್ವಿ ಆಪರೇಷನ್!

ಅನುಭವಿ ವೈದ್ಯರು ಒಮ್ಮೆಗೆ ಒಂದು ಆಪರೇಷನ್ ಮಾತ್ರ ಮಾಡಿದರೆ, ಈ ರಾಜಕೀಯ ಚಾಣಾಕ್ಷ ವೈದ್ಯರು ಏಕಕಾಲದಲ್ಲಿ ನಾಲ್ಕು ರೀತಿಯ ಆಪರೇಷನ್ ಗಳನ್ನು ನಡೆಸಬಲ್ಲರು. ಅವರು ಬೇರೆ ಯಾರೂ ಅಲ್ಲ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಈ ಆಪರೇಷನ್ ಗಳು ಬಹುತೇಕ ಯಶಸ್ವಿಯಾಗುತ್ತಿರುವುದು ಮತ್ತೊಂದು ವಿಶೇಷ. ಇಷ್ಟಕ್ಕೂ ಅವರು ಮಾಡುತ್ತಿರುವ ಆಪರೇಷನ್ ಗಳು ಯಾವುವು ಗೊತ್ತೇ?

ಬಿಹಾರದಲ್ಲಿ ಆರ್.ಜೆ.ಡಿ ಗೆ ಕೈಕೊಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದ ಜೆಡಿಯು, ತಮಿಳುನಾಡು ಬಿಜೆಪಿಯೊಂದಿಗೆ ಕೈಜೋಡಿಸಲಿರುವ ಅಣ್ಣಾಡಿಎಂಕೆ, ಗುಜರಾತಿನಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ವಲಸೆ ಹೋಗುತ್ತಿರುವ ಕಾಂಗ್ರೆಸ್ ಶಾಸಕರು ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸೇರುತ್ತಿರುವ ಸಮಾಜವಾದಿ ಪಕ್ಷದ ನಾಯಕರು. ಇವುಗಳನ್ನೆಲ್ಲಾ ನೋಡುತ್ತಿದ್ದರೆ ಏನನ್ನಿಸುತ್ತದೆ. ಈ ನಾಲ್ಕು ರಾಜ್ಯಗಳಲ್ಲಿ ಇರುವ ಸಾಮಾನ್ಯ ಅಂಶವೆಂದರೆ ಅದು ಬಿಜೆಪಿ. ಎಲ್ಲಾ ಕಡೆಯೂ ಕಮಲಪಕ್ಷಕ್ಕೆ ಲಾಭವಾಗುವಂತೆ ಪರಿಸ್ಥಿತಿಗಳು ಸೃಷ್ಟಿಯಾಗುತ್ತಿರುವುದು. ಮತ್ತೊಂದು ಕಡೆ ಪ್ರತಿಪಕ್ಷಗಳಿಗೆ ಶಾಕ್ ಮೇಲೆ ಶಾಕ್…

ಜಿಯೋಗೆ ಸ್ಪರ್ಧೆ ನೀಡಲು ಬರುತ್ತಿದೆ ಐಡಿಯಾ 4ಜಿ ಫೋನ್

ಒಟ್ಟಾರೆಯಾಗಿ ದೇಶಾದ್ಯಂತ ಒಂದು ರೀತಿಯ ಆಪರೇಷನ್ ನಡೆಯುತ್ತಿದೆ. ಅದೇ ಪೊಲಿಟಿಕಲ್ ಆಪರೇಷನ್. ವಿರೋಧಿಗಳನ್ನು ಮಣಿಸುತ್ತಾ, ಹಳೆಯ ಮಿತ್ರರನ್ನು ಮತ್ತೆ ತನ್ನೊಳಗೆ ಸೆಳೆಯುತ್ತಾ ಬಿಜೆಪಿ ನಡೆಸುತ್ತಿರುವ ಆಪರೇಷನ್ ಇದು. ಏನು ನಡೆಯುತ್ತಿದೆ, ಮುಂದೇನು ನಡೆಯಲಿದೆ ಎಂದು ಅರ್ಥ ಮಾಡಿಕೊಳ್ಳುವ ಮೊದಲೇ ವಿರೋಧಿ ಶಿಬಿರಗಳಿಗೆ ಭರಿಸಲಾರದ ಹೊಡೆತ ನೀಡುತ್ತಿದೆ. ಅದು ನೀಡುವ ಹೊಡೆತಕ್ಕೆ ವಿರೋಧಿಗಳು ದಿಕ್ಕುತೋಚದಂತಾಗುತ್ತಿದ್ದಾರೆ.

ಅಧಿಕಾರವಿದ್ದಾಗಲೇ ರಾಜಕೀಯವಾಗಿ ಮತ್ತಷ್ಟು ಬಲ ವೃದ್ಧಿಸಿಕೊಳ್ಳಬೇಕು ಎಂದು ತೀರ್ಮಾನಿಸಿರುವ ನಾಯಕರು, ಯೋಜನೆಯಂತೆ ಎಚ್ಚರಿಕೆಯಿಂದ ಕಾರ್ಯ ಸಾಧಿಸುತ್ತಿದ್ದಾರೆ. ಪ್ರತಿಪಕ್ಷಗಳು ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಬಲವಾದ ಪೆಟ್ಟು ಕೊಡುತ್ತಿದ್ದಾರೆ. ಬಿಹಾರದಿಂದ ತಮಿಳುನಾಡಿನವರೆಗೂ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳೇ ಇದಕ್ಕೆ ಪ್ರತ್ಯಕ್ಷ ಉದಾಹರಣೆ.

ಮುಂದಿನ ಚುನಾವಣೆಯಲ್ಲಿ ಮೋದಿಗೆ ಸವಾಲೆಸೆಯಬಲ್ಲವರು ಯಾರೂ ಇಲ್ಲ: ನಿತೀಶ್ ಕುಮಾರ್

ಕಳೆದ ಕೆಲ ದಿನಗಳಿಂದ ದೇಶದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲಿ ಮೊದಲನೆಯದು ಬಿಹಾರದಲ್ಲಿ ಆಡಳಿತ ಮೈತ್ರಿ ಸರ್ಕಾರದಲ್ಲಿ ಬದಲಾವಣೆ. ಆರ್.ಜೆ.ಡಿ, ಕಾಂಗ್ರೆಸ್ ಮತ್ತು ಜೆಡಿಯು ಮಹಾಮೈತ್ರಿಕೂಟಕ್ಕೆ ಜೆಡಿಯು ಗುಡ್ ಬೈ ಹೇಳಿದೆ. ಹೀಗೆ ನಡೆಯುತ್ತದೆ ಎಂದೂ ಯಾರೂ ನಿರೀಕ್ಷಿಸಿರಲೂ ಇಲ್ಲ.

ಬಿಜೆಪಿ ಸೇರುತ್ತಿರುವ ಗುಜರಾತ್ ಕಾಂಗ್ರೆಸ್ ನಾಯಕ ಬಲವಂತ್ ಸಿಂಗ್ ರಜಪೂತ್

ಆ ಶಾಕ್ ನಿಂದ ಕಾಂಗ್ರೆಸ್ ಹೊರಬರುವ ಮುನ್ನವೇ ಗುಜರಾತ್ ನಲ್ಲಿ ಮತ್ತೊಂದು ಹೊಡೆತ. ಗುಜರಾತ್ ನಲ್ಲಿ ರಾಜ್ಯಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ಕಾಂಗ್ರೆಸ್ ಪಕ್ಷ 6 ಶಾಸಕರು ಬಿಜೆಪಿಗೆ ಹಾರಿದ್ದಾರೆ. ಇನ್ನೊಂದಷ್ಟು ದಿನ ಇದ್ದಿದ್ದರೆ ಮತ್ತಷ್ಟು ಶಾಸಕರು ಜಂಪ್ ಮಾಡುತ್ತಿದ್ದರೇನೋ. ಆದರೆ ಈ ಬಾರಿ ಬೇಗ ಎಚ್ಚೆತ್ತುಕೊಂಡ ಕಾಂಗ್ರೆಸ್ ನಾಯಕರು ಉಳಿದ ಶಾಸಕರನ್ನು ಉಳಿಸಿಕೊಳ್ಳಲು ಎಲ್ಲರನ್ನೂ ಕರ್ನಾಟಕಕ್ಕೆ ಸಾಗಹಾಕಿದ್ದಾರೆ.

ಇದು ಹೀಗಿರುವಾಗಲೇ ತಮಿಳುನಾಡಿನ ರಾಜಕೀಯ ಬದಲಾಗಿದೆ. ಆಡಳಿತ ರಾಜಕೀಯ ಪಕ್ಷ ಅಣ್ಣಾಡಿಎಂಕೆ ಗೆ ಮಂತ್ರ ಹಾಕಿದ ಬಿಜೆಪಿ, ಮತ್ತೊಮ್ಮೆ ಆ ಪಕ್ಷವನ್ನು ತಮ್ಮೊಂದಿಗೆ ಕೈಜೋಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈಗ ಉತ್ತರ ಪ್ರದೇಶದಲ್ಲಿಯೂ ಸಮಾಜವಾದಿ ಪಕ್ಷವನ್ನು ಟಾರ್ಗೆಟ್ ಮಾಡಿದೆ. ನಿರೀಕ್ಷಿಸಿದಂತೆಯೇ ಸಮಾಜವಾದಿ ಪಕ್ಷದ ನಾಯಕರು ಬಿಜೆಪಿಯಿಂದ ಹಾರ ಹಾಕಿಸಿಕೊಂಡಿದ್ದಾರೆ. ಇದು ಇಲ್ಲಿಗೆ ನಿಲ್ಲುತ್ತಾ, ಇನ್ನೇನಾದರೂ ಹೊಸ ಆಪರೇಷನ್ ಗಳಿಗೆ ಕೈಹಾಕುತ್ತಾರಾ ಕಾದು ನೋಡಬೇಕು.

Loading...