ಈ ಇಬ್ಬರ ಚಿತ್ರ ಬಿಡಿಸಿದ ಮಹಿಳೆಯನ್ನು ಹೊರ ಹಾಕಿದ ಪತಿ |News Mirchi

ಈ ಇಬ್ಬರ ಚಿತ್ರ ಬಿಡಿಸಿದ ಮಹಿಳೆಯನ್ನು ಹೊರ ಹಾಕಿದ ಪತಿ

ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ಮುಸ್ಲಿಂ ಮಹಿಳೆ ನಗ್ಮಾ ಸಂಸಾರದಲ್ಲಿ ವಿಚಿತ್ರ ಕಾರಣಕ್ಕೆ ಬಿರುಕು ಮೂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ಅವರ ಮೇಲಿನ ಅಭಿಮಾನದಿಂದ ಆಕೆ ಅವರ ಚಿತ್ರ ಬಿಡಿಸಿದ್ದೇ ಆಕೆಯನ್ನು ಸಂಕಷ್ಟಕ್ಕೆ ದೂಡಿದೆ.

24 ವರ್ಷದ ನಗ್ಮಾ ಎರಡು ವರ್ಷದ ಹಿಂದೆ ಬಲಿಯಾ ಜಿಲ್ಲೆಯ ಬಸರಿಕ್ಪುರ್ ಗ್ರಾಮದ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. ಒಂದು ದಿನ ಮೋದಿ ಮತ್ತು ಆದಿತ್ಯನಾತ್ ಅವರ ಚಿತ್ರ ಬಿಡಿಸಿದ ಮಹಿಳೆ ತನ್ನ ಗಂಡನಿಗೆ ಅವುಗಳನ್ನು ತೋರಿಸಿದ್ದಳು. ಅಷ್ಟೇ ಅದನ್ನೇ ನೋಡಿ ಆಕ್ರೋಶಗೊಂಡ ಗಂಡ ಮನೆಯ ಇತರೆ ಸದಸ್ಯರೊಂದಿಗೆ ಸೇರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಕೊನೆಗೆ ಮಹಿಳೆಯ ತಂದೆಯನ್ನು ಕರೆಸಿ ಆಕೆಯನ್ನು ಕರೆದೊಯ್ಯುವಂತೆ ಹೇಳಿದ್ದಾರೆ.

ಹೀಗಾಗಿ ಬೇರೆ ದಾರಿ ಕಾಣದೆ ಮಹಿಳೆ ಮತ್ತು ಆಕೆಯ ತಂದೆ ಪೊಲೀಸರ ಮೊರೆ ಹೋದರು. ಅಷ್ಟರಲ್ಲಿ ಗಂಡ ಮತ್ತೊಂದು ಮದುವೆಯಾಗುತ್ತಿರುವ ಸುದ್ದಿ ಕೇಳಿ ಪತ್ನಿ ಮತ್ತೆ ಗಂಡನ ಮನೆಗೆ ಹೋದ ನಗ್ಮಾ ಮೇಲೆ ಮತ್ತೊಮ್ಮೆ ಹಲ್ಲೆ ನಡೆದಿದೆ. ಹೀಗಾಗಿ ಆಕೆ ಮತ್ತೆ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾಳೆ. ಈಗ ಕೇಸು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Loading...
loading...
error: Content is protected !!