ಮೋದಿ ಕೇಳಿದ 10 ಪ್ರಶ್ನೆಗಳು. ನೀವೂ ಉತ್ತರಿಸಿ

ಗರಿಷ್ಠ ಮುಖಬೆಲೆಯ ನೋಟು ರದ್ದಾದ ನಂತರ ದೇಶಾದ್ಯಂತ ಜನಸಾಮಾನ್ಯರೂ ಕೂಡಾ ಕಪ್ಪು ಹಣದ ಕುರಿತಂತೆ ಮತ್ತು ಪ್ರಧಾನಿ ನಿರ್ಧಾರದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಎಲ್ಲೆಡೆ ಮೋದಿ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ವಿರೋಧಿಸುತ್ತಿರುವವರೂ ಕೆಲವರಿದ್ದಾರೆ. ನೋಟು ರದ್ದು ಕ್ರಮದಿಂದ ಕಾಳಧನಿಕರಿಗೆ ನುಂಗಲಾರದ ತುತ್ತು ಆಗಿದ್ದರೂ, ಬಹಿರಂಗವಾಗಿ ವಿರೋಧಿಸುತ್ತಿರುವವರು ಕೆಲ ವಿರೋಧ ಪಕ್ಷಗಳು ಮಾತ್ರ.

Modi appಇದೀಗ ಪ್ರಧಾನಿ ಮೋದಿ, ದೇಶದಲ್ಲಿರುವ ಕಪ್ಪು ಹಣ ಮತ್ತು ಅವರು ಕೈಗೊಂಡಿರುವ ಕ್ರಮಗಳ ಕುರಿತಂತೆ ಜನರ ಅಭಿಪ್ರಾಯ ತಿಳಿಯಲು ಉದ್ದೇಶಿಸಿದ್ದು, ಅದಕ್ಕಾಗಿ ಒಂದು ಮೊಬೈಲ್ ಆಪ್ ಬಿಡುಗಡೆ ಮಾಡಿ ಅದರ ಮೂಲಕ ಕೆಲವು ಪ್ರಶ್ನೆ ಕೇಳಿದ್ದಾರೆ.

1. ಭಾರತದಲ್ಲಿ ಕಪ್ಪು ಹಣವಿದೆ ಎಂದು ನೀವು ಭಾವಿಸುತ್ತಿದ್ದೀರಾ?

2. ಕಪ್ಪು ಹಣ, ಭ್ರಷ್ಟಾಚಾರ ವಿರುದ್ಧ ಹೊರಾಟ, ಅವುಗಳನ್ನು ಕಿತ್ತೊಗೆಯಬೇಕೆಂದು ನೀವು ಬಯಸುತ್ತಿದ್ದೀರಾ.

3. ಸರ್ಕಾರ ಕಪ್ಪು ಹಣದ ವಿರುದ್ಧ ಕೈಗೊಂಡಿರುವ ಕೈಗೊಂಡಿರುವ ಕ್ರಮಕ್ಕೆ ನಿಮ್ಮ ಅಭಿಪ್ರಾಯವೇನು?

4. ಮೋದಿ ಸರ್ಕಾರ ಕಪ್ಪು ಹಣವನ್ನು ತಡೆಗಟ್ಟುತ್ತದೆ ಎಂದು ಭಾವಿಸುತ್ತಿದ್ದಿರಾ?

5. ಪ್ರಧಾನಿ ಮೋದಿಯವರ ನೋಟು ರದ್ದು ಕ್ರಮದ ಕುರಿತು ನಿಮ್ಮ ಅಭಿಪ್ರಾಯವೇನು?

6. ಕಪ್ಪು ಹಣ, ನಕಲಿ ನೋಟು, ಭಯೋತ್ಪಾದನೆಯನ್ನು ನೋಟು ರದ್ದುಗೊಳಿಸಿದ್ದರಿಂದ ತಡೆಯಬಹುದು ಎಂದುಕೊಳ್ಳುತ್ತಿದ್ದೀರಾ.

7. ನೋಟು ರದ್ದುಗೊಂಡಿದ್ದರಿಂದ ಜನ ಸಾಮಾನ್ಯರಿಗೆ ಶಿಕ್ಷಣ, ವಸತಿ, ಅರೋಗ್ಯ ಮುಂತಾ ಮೂಲಸೌಕರ್ಯಗಳನ್ನು ಒದಗಿಸಬಹುದು ಎಂದು ಭಾವಿಸುತ್ತಿದ್ದೀರಾ?

8. ಭ್ರಷ್ಟಾಚಾರ, ಕಪ್ಪು ಹಣ ತಡೆಗಟ್ಟಲು ನೋಟು ರದ್ದು ಮಾಡಿದ ಕ್ರಮದಿಂದ ನಿಮಗೆ ಸಮಸ್ಯೆಯುಂಟಾಗಿದೆ ಎಂದು ಭಾವಿಸುತ್ತಿದ್ದೀರಾ?

9. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಕೆಲವರು, ಈಗ ಕಪ್ಪು ಹಣ, ಭ್ರಷ್ಟಾಚಾರ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆಂದು ನೀವು ನಂಬುತ್ತಿದ್ದೀರಾ?

10. ನಿಮ್ಮ ಸಲಹೆ, ಚಿಂತನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೀರಾ?

ಈ ಮೇಲಿನ ಪ್ರಶ್ನೆಗಳನ್ನು ಆಪ್ ನಲ್ಲಿ ಕೇಳಿದ್ದಾರೆ. ನೀವೂ ಈ ಪ್ರಶ್ನೆಗಳಿಗೆ ಉತ್ತರಿಸಲು ಅಸಕ್ತರಾಗಿದ್ದೀರಾ? ಹಾಗಾದರೆ ಈ ಕೆಳಗಿನ ಲಿಂಕ್ ಬಳಸಿ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ, ಉತ್ತರಿಸಿ.

http://nm4.in/dnldapp