ಸೋತ ಮೀರಾ ಕುಮಾರ್ ಗೆ ಮೋದಿ ಅಭಿನಂದನೆ |News Mirchi

ಸೋತ ಮೀರಾ ಕುಮಾರ್ ಗೆ ಮೋದಿ ಅಭಿನಂದನೆ

ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಸೋಲಿನ ರುಚಿ ಕಂಡ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಪ್ರಜಾಪ್ರಭುತ್ವದ ತತ್ವ, ಮೌಲ್ಯಗಳ ಸ್ಪೂರ್ತಿಯೊಂದಿಗೆ ಮೀರಾ ಕುಮಾರ್ ಪ್ರಚಾರ ನಡೆಸಿದ್ದಾರೆ ಎಂದು ಟ್ವಿಟರ್ ಮೂಲಕ ಅಭಿನಂದಿಸಿದರು.

ಚುನಾವಣೆಯಲ್ಲಿ ಮೀರಾ ಕುಮಾರ್ ಸೋತರೂ ಅವರನ್ನು ಪ್ರಧಾನಿ ಅಭಿನಂದಿಸಿರುವುದು ಮಹತ್ವ ಪಡೆದಿದೆ. ಎನ್ಡಿಎ ಪರವಾಗಿ ಕಣಕ್ಕಿಳಿದಿದ್ದ ರಾಮನಾಥ್ ಕೋವಿಂದ್ ಅವರು 7,02,643 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಮೀರಾ ಕುಮಾರ್ 3,67,114 ಮತಗಳನ್ನು ಪಡೆದು ಸೋಲುಂಡರು. ಒಟ್ಟು ಮತಗಳ ಮೌಲ್ಯದಲ್ಲಿ ರಾಮನಾಥ್ ಅವರು ಶೇ.65.65 ರಷ್ಟು ಪಡೆದರೆ, ಮೀರಾ ಕುಮಾರ್ ಶೇ.34.35 ರಷ್ಟು ಮತ ಗಳಿಸಿದರು.

Loading...
loading...
error: Content is protected !!