ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ – News Mirchi

ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ

ರಾಜಧಾನಿ ದೆಹಲಿಯಲ್ಲಿ ನಡೆದ 71ನೇ ಸ್ವಾತಂತ್ರ್ಯೋತ್ಸವದಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಹೇಳಿದ್ದಾರೆ. ರಾಜ್ ಘಾಟ್ ಬಳಿ ಮಹಾತ್ಮಾ ಗಾಂಧಿಗೆ ನಮನ ಸಲ್ಲಿಸಿದ ಮೋದಿ, ಕೆಂಪು ಕೋಟೆ ಮೇಲೆ ದ್ವಜಾರೋಹಣ ನಡೆಸಿದರು. ಈ ಸಂಭ್ರಮಾಚರಣೆಯನ್ನು ವೀಕ್ಷಿಸಲು ಸಾವಿರಾರು ಜನರು ಕೆಂಪು ಕೋಟೆಗೆ ಆಗಮಿಸಿದ್ದರು.

ಪ್ರಧಾನಿಯಾಗಿ ನಾಲ್ಕನೇ ಬಾರಿ ರಾಷ್ಟ್ರ ದ್ವಜಾರೋಹಣ ನಡೆಸಿದ ಮೋದಿ, ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಪ್ರೀತಿಯ ದೇಶದ ಜನತೆಗೆ ಶುಭಾಶಯಗಳು… ನಾವು ಸ್ವಾತಂತ್ರ್ಯ ದಿನಾಚರಣೆಯ ಜೊತೆ ಶ್ರೀಕೃಷ್ಣಾಷ್ಟಮಿ ಆಚರಿಸುತ್ತಿದ್ದೇವೆ ದೇಶಕ್ಕಾಗಿ ಎಷ್ಟೋ ಜನ ಪ್ರಾಣತ್ಯಾಗ ಮಾಡಿದ್ದಾರೆ. ಅವರಿಗೆಲ್ಲಾ ನನ್ನ ನಮನಗಳು. ಕಳೆದ ದಿನಗಳಲ್ಲಿ ಹಲವು ಪ್ರದೇಶಗಳಲ್ಲಿ ಪ್ರವಾಹದಿಂದ ನಷ್ಟವುಂಟಾಗಿದೆ. ಗೋರಖ್ ಪುರ ಆಸ್ಪತ್ರೆಯಲ್ಲಿ ಏನೂ ಅರಿಯದ ಮಕ್ಕಳು ಸಾವನ್ನಪ್ಪಿರುವುದು ನೋವಿನ ವಿಷಯ. ಒಗ್ಗಟ್ಟಿನ ಹೋರಾಟದಿಂದಾಗಿ ಆಂಗ್ಲರು ಭಾರತ ಬಿಟ್ಟು ಹೋದರು, ಹಾಗೆಯೇ ನವ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು. 2022 ರ ವೇಳೆಗೆ ನವ ಭಾರತವನ್ನು ನಿರ್ಮಿಸಬೇಕು ಎಂದು ಜನತೆಗೆ ಮೋದಿ ಕರೆ ನೀಡಿದರು.

ಗುಂಡಿನಿಂದಲ್ಲ, ಅಪ್ಪುಗೆಯಿಂದಲೇ ಕಾಶ್ಮೀರ ಸಮಸ್ಯೆ ಬಗೆಹರಿಯುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು. ಗಡಿ ರಕ್ಷಣೆಗಾಗಿ ನಮ್ಮ ಸೈನಿಕರಿದ್ದಾರೆ. ಉಗ್ರವಾದದ ವಿರುದ್ಧ ವಿಶ್ವದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಭಯೋತ್ಪಾದನೆಯನ್ನು ಕೊನೆಗಾಣಿಸಲು ವಿಶ್ವದ ದೇಶಗಳು ಸಹಕಾರ ನೀಡುತ್ತಿವೆ. ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿ ಸಾಗುತ್ತಾ, ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇನ್ನು ಮುಂದೆ ಬಡವರನ್ನು ದೋಚುವವರಿಗೆ ಕಣ್ಣಿಗೆ ನಿದ್ದೆ ಇಲ್ಲದಂತೆ ಮಾಡುತ್ತೇವೆ, ಪ್ರಾಮಾಣಿಕರಿಗೆ ಪ್ರೋತ್ಸಾಹ ನೀಡುತ್ತೇವೆ ಎಂದರು. ಜಿಎಸ್ಟಿ ಜಾರಿಯನ್ನೂ ನೆನಪಿಸಿದ ಮೋದಿ, ಹೊಸ ತೆರಿಗೆ ನೀತಿಗೆ ಎಲ್ಲರ ಬೆಂಬಲ ಸಿಗುತ್ತಿದೆ ಎಂದರು. ಇಷ್ಟು ಕಡಿಮೆ ಅವಧಿಯಲ್ಲಿ ಜಿಎಸ್ಟಿಯನ್ನು ಹೇಗೆ ಭಾರತ ಜಾರಿಗೆ ತಂದಿತು ಎಂದು ವಿಶ್ವವೇ ಬೆರಗಾಗಿದೆ ಎಂದರು.

Loading...