ಕಪ್ಪು ಕುಳಗಳ ವಿರುದ್ಧ ಎರಡನೇ ಸಮರ ಶುರು – News Mirchi
We are updating the website...

ಕಪ್ಪು ಕುಳಗಳ ವಿರುದ್ಧ ಎರಡನೇ ಸಮರ ಶುರು

ಕಪ್ಪು ಹಣದ ವಿರುದ್ಧ ಸಮರ ಸಾರಿ ಮೋದಿ ತೆಗೆದುಕೊಂಡ ನೋಟು ನಿಷೇಧದ ಕ್ರಮದ ಸಂದರ್ಭದಲ್ಲಿ ಮಿತಿ ಮೀರಿ ನಗದು ವ್ಯವಹಾರ ನಡೆಸಿದ ಸುಮಾರು 60 ಸಾವಿರ ಜನರ ವಿರುದ್ಧ ತೆರಿಗೆ ಇಲಾಖೆ ತನಿಖೆಗೆ ಮುಂದಾಗಿದೆ. ಕಪ್ಪು ಹಣ ಚಲಾವಣೆ ವಿರುದ್ಧ ಎರಡನೇ ಹಂತದ ಕಾರ್ಯಚರಣೆಯನ್ನು ತೆರಿಗೆ ಇಲಾಖೆ ಶುಕ್ರವಾರ ಆರಂಭಿಸಿದೆ. [ಹೇಮಾ ಮಾಲಿನಿ ದಿನಾ ಕುಡಿಯುತ್ತಾರೆ ಎಂದ ಶಾಸಕ!]

ಮೊದಲ ಹಂತದ ಕಾರ್ಯಚರಣೆ ಜನವರಿ 31 ರಂದು ಆರಂಭಿಸಲಾಗಿತ್ತು. ಈ ವೇಳೆ ಹಲವರಿಗೆ ಆನ್ಲೈನ್ ಮೂಲಕ ಪ್ರಶ್ನಾವಳಿ ಕಳುಹಿಸಿದ್ದ ತೆರಿಗೆ ಇಲಾಖೆ, 17 ಲಕ್ಷಕ್ಕೂ ಹೆಚ್ಚು ಜನರ ವ್ಯವಹಾರಗಳ ಕುರಿತು ತನಿಖೆ ನಡೆಸಿತ್ತು. ಇದರಲ್ಲಿ 9 ಲಕ್ಷಕ್ಕೂ ಹೆಚ್ಚು ಜನ ತೆರಿಗೆ ಇಲಾಖೆಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದರು.

ನವೆಂಬರ್ 9, 2016 ರಿಂದ ಫೆಬ್ರವರಿ ‌2017 ರ ನಡುವೆ ರೂ.9,334 ಕೋಟಿ ಮೌಲ್ಯದ ಅಘೋಷಿತ ಅದಾಯವನ್ನು ತೆರಿಗೆ ಇಲಾಖೆ ಪತ್ತೆ ಹಚ್ಚಿರುವುದಾಗಿ ವರದಿ ಹೇಳುತ್ತಿದೆ.

Contact for any Electrical Works across Bengaluru

Loading...
error: Content is protected !!