ಭಾರತದಲ್ಲಿ ಪ್ರಾಮಾಣಿಕ ರಾಜಕಾರಣಿಯಾಗಿರುವುದು ತುಂಬಾ ಕಷ್ಟ: ರಾಹುಲ್ |News Mirchi

ಭಾರತದಲ್ಲಿ ಪ್ರಾಮಾಣಿಕ ರಾಜಕಾರಣಿಯಾಗಿರುವುದು ತುಂಬಾ ಕಷ್ಟ: ರಾಹುಲ್

ಪ್ರಾಮಾಣಿಕ ರಾಜಕಾರಣಿಗಳೇ ಹೆಚ್ಚು ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಗುಜರಾತ್ ನಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್, ಪಟೇದಾರ್ ಸಮುದಾಯ ಹೆಚ್ಚಾಗಿರುವ ಸೌರಾಷ್ಟ್ರ ಪ್ರದೇಶದಲ್ಲಿ ಮಂಗಳವಾರ ಪ್ರವಾಸ ಮಾಡಿ ಅಲ್ಲಿನ ಜನರ ಮನ ಗೆಲ್ಲಲು ಪ್ರಯತ್ನಿಸಿದರು. ರಾಜ್ ಕೋಟ್ ನಲ್ಲಿ ರಾಹುಲ್ ಮಾತನಾಡಿದ ರಾಹುಲ್, ಪ್ರಾಮಾಣಿಕ ರಾಜಕೀಯ ನಾಯಕನಾಗಿರುವುದೇ ಭಾರತದಲ್ಲಿ ಅತ್ಯಂತ ಕಷ್ಟಕರ ಕೆಲಸ, ಇದರಿಂದ ನಾನು ಅಂತಹದ್ದೇ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ ಎಂದು ಹೇಳಿದರು.

ಸರಿಯಾದ ನೀತಿ ನಿಯಮಗಳಿಲ್ಲದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಬಿಜೆಪಿ ಸರ್ಕಾರ ದೇಶದ ಜನತೆಯ ಮೇಲೆ ಹೇರಿದೆ. ಈ ವಿಷಯವನ್ನು ಸ್ವತಃ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಹೇಳಿದ್ದಾರೆ. ಜಿಎಸ್ಟಿ ಯನ್ನು ಘೋಷಿಸಿದ ಕೂಡಲೇ ಇದು ಕ್ರಿಮಿನಲ್ ಕ್ರಮ ಎಂದು ಮನಮೋಹನ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದನ್ನು ನಾನು ಈ ಸಂದರ್ಭದಲ್ಲಿ ನೆನಪಿಸುತ್ತೇನೆ ಎಂದು ರಾಹುಲ್ ಹೇಳಿದರು.

ನಾವು ಅಧಿಕಾರಕ್ಕೆ ಬಂದರೆ…

ನಾವು ಅಧಿಕಾರಕ್ಕೆ ಬಂದರೆ, ರೈತರು ಮತ್ತು ಇತರ ದುರ್ಬಲ ವರ್ಗಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿ ಮಾಡುತ್ತೇವೆ. ನರೇಂದ್ರ ಮೋದಿಯವರ ಗುಜರಾತ್ ಮಾದರಿ ವಿಫಲವಾಗಿದೆ. ಜನಸಾಮಾನ್ಯರನ್ನು ಕಡೆಗಣಿಸಿ ಧನಿಕರಿಗಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಕೇವಲ ಭಾಷಣಗಳಿಗಷ್ಟೇ ಬಿಜೆಪಿ ನಾಯಕರು ಸೀಮಿತವಾಗಿದ್ದಾರೆ ಎಂದು ರಾಹುಲ್ ಆರೋಪಿಸಿದರು.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!