ಸಂತರಿಗೆ ಭಿಕ್ಷೆಯನ್ನೂ ನೀಡದ ಕಾಲದಲ್ಲಿ ಮೋದಿ ಉತ್ತರಪ್ರದೇಶ ಕೊಟ್ಟಿದ್ದಾರೆ: ಯೋಗಿ – News Mirchi

ಸಂತರಿಗೆ ಭಿಕ್ಷೆಯನ್ನೂ ನೀಡದ ಕಾಲದಲ್ಲಿ ಮೋದಿ ಉತ್ತರಪ್ರದೇಶ ಕೊಟ್ಟಿದ್ದಾರೆ: ಯೋಗಿ

ಲಕ್ನೋ: ಸಂತರಿಗೆ ಭಿಕ್ಷೆಯನ್ನೂ ನೀಡದ ಕಾಲದಲ್ಲಿ ನನಗೆ ಪ್ರಧಾನಿಯವರು ಉತ್ತರ ಪ್ರದೇಶವನ್ನು ನೀಡಿದ್ದಾರೆ. ಆದರೆ ಇದರಲ್ಲಿ ಹಲವು ಜವಾಬ್ದಾರಿಗಳೂ ಇವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಲಕ್ನೋದಲ್ಲಿ ಪತಂಜಲಿ ಯೋಗ ಪೀಠ ಆಯೋಜಿಸಿದ್ದ ಯೋಗ ಮಹೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.

ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದಾಗ ನನ್ನ ಒಂದು ಜೊತೆ ಬಟ್ಟೆ ಮಾತ್ರವಿತ್ತು. ಈ ಹೊಣೆಯನ್ನು ಒಪ್ಪಿಕೊಳ್ಳುವುದೇ ಬೇಡವೇ ಎಂಬ ಗೊಂದಲದಲ್ಲಿದ್ದೆ. ಒಪ್ಪಿಕೊಳ್ಳದಿದ್ದರೆ ಪಲಾಯನವಾದವಾಗುತ್ತಿತ್ತು, ಹಾಗಾಗಿ ಒಪ್ಪಿಕೊಂಡೆ ಎಂದು ಹೇಳಿದರು.

ಪ್ರಧಾನಿ ಮೋದಿಯವರ ಹಾದಿಯಲ್ಲೇ ಸಾಗುವುದಾಗಿ ಹೇಳಿರುವ ಯೋಗಿ, ರಾಜ್ಯದ 22 ಕೋಟಿ ಜನರ ಒಳಿತಿಗೆ ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದರು.

Loading...

Leave a Reply

Your email address will not be published.