ನೋಟಿನಲ್ಲಿ ಮೋದಿ, ಕೇವಲ ಮನರಂಜನೆಗಾಗಿ ಮಾತ್ರ

ಕೇಂದ್ರ ಸರ್ಕಾರ ರೂ. 2 ಸಾವಿರ ಮುಖಬೆಲೆಯ ನೋಟು ಬಿಡುಗಡೆ ಮಾಡಿದ ದಿನದಿಂದ ಅದರ ಮೇಲೆ ಹಲವರು ಹಲವು ರೀತಿಯ ಪ್ರಯೋಗಗಳು ನಡೆಸುತ್ತಿದ್ದಾರೆ. ಇದೀಗ ಮತ್ತೊಂದು ಇಂಟರೆಸ್ಟಿಂಗ್ ವಿಷಯ ಹರಿದಾಡುತ್ತಿದೆ. 2 ಸಾವಿರದ ನೋಟನ್ನು ನಿಮ್ಮ ಮೊಬೈಲ್ ನಿಂದ ಸ್ಕ್ಯಾನ್ ಮಾಡಿದರೆ ನಿಮ್ಮ ಮೊಬೈಲ್ ನಲ್ಲಿ ಮೋದಿ ಪ್ರತ್ಯಕ್ಷವಾಗುತ್ತಾರೆ. ಅದು ಹೇಗೆ ಸಾಧ್ಯ ಎನ್ನುತ್ತೀರಾ? ಈ ವಿಚಿತ್ರ ವಿಷಯವೇ ಈಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವುದು.

ನೋಟನ್ನು ಮೊಬೈಲ್ ನಿಂದ ಸ್ಕ್ಯಾನ್ ಮಾಡಿದರೆ, ಅಂದು ಮೋದಿ ಮಾಡಿದ ಕಪ್ಪು ಹಣ ಕುರಿತ ಭಾಷಣದ ವೀಡಿಯೋ ಪ್ಲೇ ಆಗುತ್ತದೆ. ನಿಮ್ಮ ಮೊಬೈಲ್ ನಲ್ಲಿ ಒಂದು ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಇದು ಸಾಧ್ಯ. ಮೋದಿ ಕೀನೋಟ್’ ಎಂಬ ಅಂಡ್ರಾಯ್ಡ್ ಆಪ್ ಮೂಲಕ ಇದು ಸಾಧ್ಯ. ಇದರ ಅಧಾರದಿಂದಲೇ ಆ ವೀಡಿಯೋ ಪ್ರತ್ಯಕ್ಷವಾಗುತ್ತದೆ.

ಆದರೆ ಸ್ಕ್ಯಾನ್ ಮಾಡಿದಾಗ ಆ ವೀಡಿಯೋ ಪ್ಲೇ ಆದರೆ ಅದು ಅಸಲಿ ನೋಟು, ಇಲ್ಲವೆಂದರೆ ನಕಲಿ ನೋಟು ಎಂಬ ಮಾತುಗಳಲ್ಲಿ ಸತ್ಯವಿಲ್ಲ. ಕೇವಲ ಮನರಂಜನೆಗಾಗಿ ಈ ಆಪ್ ಸಿದ್ಧಪಡಿಸಲಾಗಿದೆ. ಸ್ಕ್ಯಾನ್ ಮಾಡಿದಾಗ ಮೋದಿಯವರ ಬದಲು ಬೇರೆ ವಿಡಿಯೋ ಕೂಡಾ ಪ್ಲೇ ಆಗುವಂತೆ ಮಾಡಲು ಸಾಧ್ಯ ಎಂದು ಟೆಕ್ನಿಕಲ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ. ಆ ಆಪ್ ಅಭಿವೃದ್ಧಿ ಮಾಡುವ ವೇಳೆ ಆಪ್ ನಲ್ಲೇ ಮೋದಿ ವೀಡಿಯೋ ಇಂಪೋಸ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ಬೆಂಗಳೂರಿನ ಒಂದು ಸ್ಟಾರ್ಟಪ್ ಕಂಪನಿಯೊಂದು ಈ ಆಪ್ ಡೆವಲಪ್ ಮಾಡಿದೆ. ಈ ಆಪ್ ಅನ್ನು ಮನರಂಜನೆ ದರಷ್ಟಿಯಿಂದ ಮಾಡಲಾಗಿದೆಯೇ ಹೊರತು, ಇದರ ಮೂಲಕ ಅಸಲಿ ನೋಟು, ನಕಲಿ ನೋಟು ಪತ್ತೆ ಹಚ್ಚಲು ಸಾಧ್ಯವಿಲ್ಲ.