ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ, ಪೇಟಿಎಂ ಸಂಸ್ಥಾಪಕನಿಗೆ ಸ್ಥಾನ

ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಇಬ್ಬರು ವ್ಯಕ್ತಿಗಳಿಗೆ ಸ್ಥಾನ ಲಭಿಸಿದೆ. ಅದರಲ್ಲೊಬ್ಬರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮತ್ತೊಬ್ಬರು ಪೇಟಿಎಂ ಸಂಸ್ಥಾಪಕ ವಿಜಯ ಶೇಖರ್ ಶರ್ಮ.

ಜನರ ಮೇಲೆ ಪ್ರಭಾವ ಬೀರಿದ ವಿಶ್ವದ 100 ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯನ್ನು ಟೈಮ್ಸ್ ಮ್ಯಾಗಜೀನ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ಪುತಿನ್, ಬ್ರಿಟನ್ ಪ್ರಧಾನಿ ಥೆರೆಸಾ ಮೇ ರವರೂ ಇದ್ದಾರೆ.

ಸಾಂಪ್ರದಾಯಿಕ ಮಾಧ್ಯಮಗಳನ್ನು ಪಕ್ಕಕ್ಕಿಟ್ಟು ಪ್ರಧಾನಿ ಮೋದಿ ಟ್ವಿಟರ್ ಅನ್ನು ಸಮರ್ಥವಾಗಿ ಬಳಸುತ್ತಿದ್ದಾರೆ ಎಂದು ಪಂಕಜ್ ಮಿಶ್ರಾ ಟೈಮ್ಸ್ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ದೊಡ್ಡ ನೋಟು ರದ್ದು ಕ್ರಮವನ್ನು ತಮಗೆ ಅನುಕೂಲವಾಗಿ ಬಳಸಿಕೊಳ್ಳಲು ಪೇಟಿಎಂ ವ್ಯವಸ್ಥಾಪಕ ಯಶಸ್ವಿಯಾಗಿದ್ದಾರೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಹೇಳಿದ್ದಾರೆ.

Loading...
error: Content is protected !!