ಹಲವು ಪ್ರಧಾನಿಗಳ ಜೊತೆ ಮೋದಿ ಭೇಟಿ, ದ್ವಿಪಕ್ಷೀಯ ಒಪ್ಪಂದಗಳ ಕುರಿತು ಚರ್ಚೆ

ಏಷ್ಯಾ ಶೃಂಗಸಭೆಯ ಭಾಗವಾಗಿ ಫಿಲಿಪ್ಪೀನ್ಸ್ ನಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಒಂದು ಕ್ಷಣವೂ ಬಿಡುವಿಲ್ಲದ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ. ನಿರಂತರವಾಗಿ ವಿವಿಧ ದೇಶಗಳ ಪ್ರಧಾನಿಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಬೆಳಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕೋಮ್ ಟರ್ನಬುಲ್, ವಿಯೆಟ್ನಾಂ ಪ್ರಧಾನಿ ಗುಯೊನ್ ಯುವನ್ ಹುಸಿ, ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಭೇಟಿ ಮಾಡಿದರು. ಈ ಸಂದರ್ಭಗಳಲ್ಲಿ ಆಯಾ ದೇಶಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ನಂತರ ಬ್ರುನೈ ಸುಲ್ತಾನ್ ಹಾಸ್ಸನಲ್ ಬೋಲ್ಕೈ ಅವರೊಂದಿಗೂ ಕೂಡಾ ಭೇಟಿ ಮಾಡಿ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡರು. ನಿನ್ನೆ ಫಿಲಿಪ್ಪೀನ್ಸ್ ಅಧ್ಯಕ್ಷ ಡ್ಯುಟೆರೆಟೆ ಅವರೊಂದಿಗೆ ಭೇಟಿ ಮಾಡಿ ಹಲವು ಮಹತ್ವದ ಒಪ್ಪಂದಗಳ ಕುರಿತು ಚರ್ಚಿಸಿದರು.

Get Latest updates on WhatsApp. Send ‘Add Me’ to 8550851559