Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಪ್ರಧಾನಿ ಮಯನ್ಮಾರ್ ಭೇಟಿ: ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಚರ್ಚೆ – News Mirchi

ಪ್ರಧಾನಿ ಮಯನ್ಮಾರ್ ಭೇಟಿ: ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಚರ್ಚೆ

ಚೀನಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶ ಮುಗಿಸಿ ಮಯನ್ಮಾರ್ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಬುಧವಾರ ಮಯನ್ಮಾರ್ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರನ್ನು ಭೇಟಿ ಮಾಡಿದರು. ಉಭಯ ನಾಯಕರ ಭೇಟಿಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು.

ಮಯನ್ಮಾರ್ ನ ರಖೈನ್ ಉದ್ಭವಿಸಿರುವ ರೋಹಿಂಗ್ಯಾ ಮುಸ್ಲಿಮರ ಮೇಲಿನ ಜನಾಂಗೀಯ ಹಿಂಸಾಚಾರದ ಬೆನ್ನಲ್ಲೇ ಪ್ರಧಾನಿ ಮೋದಿ ಮಯನ್ಮಾರ್ ಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರೋಹಿಂಗ್ಯಾ ಮುಸ್ಲಿಮರ ಸಮಸ್ಯೆ ಪ್ರಸ್ತಾಪವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಭಾರತದಲ್ಲಿಯೂ ಸುಮಾರು 40 ಸಾವಿರ ರೋಹಿಂಗ್ಯಾ ವಲಸಿಗರಿದ್ದಾರೆ ಎನ್ನಲಾಗುತ್ತಿದ್ದು, ದೇಶದಲ್ಲಿನ ರೋಹಿಂಗ್ಯಾ ವಲಸಿಗರ ಕುರಿತು ಭಾರತವೂ ಕಳವಳ ವ್ಯಕ್ತಪಡಿಸುತ್ತಿದೆ. ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ವಲಸಿಗರನ್ನು ಗಡೀಪಾರು ಮಾಡಲು ಭಾರತ ಚಿಂತನೆ ನಡೆಸಿದೆ.

ಮೋದಿಯವರ ಪ್ರವಾಸದಲ್ಲಿ ಭಾರತ ಮತ್ತು ಮಯನ್ಮಾರ್ ಗಳ ನಡುವಿನ ವ್ಯಾಪಾರ, ಭಯೋತ್ಪಾದನೆ ವಿರುದ್ಧ ಹೋರಾಟ, ರಕ್ಷಣಾ ಕ್ಷೇತ್ರಗಳಲ್ಲಿನ ಸಹಕಾರದಲ್ಲಿ ಮತ್ತಷ್ಟು ವೃದ್ಧಿಯನ್ನು ನಿರೀಕ್ಷಿಸಲಾಗುತ್ತಿದೆ.

Contact for any Electrical Works across Bengaluru

Loading...
error: Content is protected !!