ಅಮಿತ್ ಶಾ ಬರುತ್ತಿದ್ದಾರೆ : ಬಿಜೆಪಿ ಸಂಸದರಿಗೆ ಮೋದಿ ಎಚ್ಚರಿಕೆ – News Mirchi
We are updating the website...

ಅಮಿತ್ ಶಾ ಬರುತ್ತಿದ್ದಾರೆ : ಬಿಜೆಪಿ ಸಂಸದರಿಗೆ ಮೋದಿ ಎಚ್ಚರಿಕೆ

ಗುರುವಾರ ನಡೆದ ಬಿಜೆಪಿ ಪಕ್ಷದ ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ ಅಧಿವೇಶನಗಳಿಗೆ ಗೈರು ಹಾಜರಾಗುತ್ತಿರುವ ಸಂಸದರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಹಲವು ಬಿಜೆಪಿ ಸಂಸದರು ಸಂಸತ್ ಗೆ ಗೈರು ಹಾಜರಾಗುತ್ತಿರುವುದು, ಇದರಿಂದಾಗಿಯೇ ಇತ್ತೀಚೆಗೆ ಒಬಿಸಿ ತಿದ್ದುಪಡಿ ಮಸೂದೆ ಮಂಡನೆ ವೇಳೆ ಸರಿಯಾದ ಸಂಖ್ಯಾಬಲವಿಲ್ಲದಿದ್ದನ್ನು ನೆನಪಿಸಿದ ಮೋದಿ, “ಅಮಿತ್ ಶಾ ಸಂಸತ್ತಿಗೆ ಬರುತ್ತಿದ್ದಾರೆ, ಇನ್ನು ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಬಿಜೆಪಿ ಸಂಸದರಿಗೆ ಎಚ್ಚರಿಸಿದರು. [ನೂನತ ಉಪರಾಷ್ಟ್ರಪತಿಯಾಗಿ ವೆಂಕಯ್ಯನಾಯ್ಡು ಪ್ರಮಾಣವಚನ]

ಸಂಸತ್ತಿಗೆ ಎಲ್ಲರೂ ಹಾಜರಾಗಲೇ ಬೇಕು, ನಿಮ್ಮಲ್ಲಿ ಹಲವರು ಸಂಸತ್ತಿಗೆ ಬರುತ್ತಿಲ್ಲ, ಸಂಸತ್ ಕಲಾಪಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ನನಗೆ ತಿಳಿದಿಲ್ಲ ಎಂದು ಭಾವಿಸಿದ್ದೀರಾ? ಎಂದು ಮೋದಿ ಪ್ರಶ್ನಿಸಿದರು.

ಸಂಸದರ ಗೈರುಹಾಜರಿಯಿಂದಾಗಿ ರಾಜ್ಯಸಭೆಯಲ್ಲಿ ಎದುರಾಗುತ್ತಿರುವ ಇಕ್ಕಟ್ಟಿನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮೋದಿಯವರು ಈ ಹೇಳಿಕೆ ನೀಡಿದ್ದಾರೆ. “2019 ರಲ್ಲಿ ಯಾರಿಗೆ ಟಿಕೆಟ್ ನೀಡಬೇಕು, ಯಾರಿಗೆ ನೀಡಬಾರದು ಎಂಬುದನ್ನು ನಾನೇ ತೀರ್ಮಾನಿಸುತ್ತೇನೆ, ಬೇಕಾದರೆ ನೀವು ಹೊರಗೆ ಹೋಗಿ ಮಾಧ್ಯಮಗಳಿಗೂ ಹೇಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಮೋದಿ ಹೇಳಿದರು.

Contact for any Electrical Works across Bengaluru

Loading...
error: Content is protected !!