ಆಯ್ದ ಉದ್ಯಮಿಗಳಿಗೆ ಬ್ಯಾಂಕ್ ಸಾಲ ಕೊಡಿಸಿ ಜನರ ಹಣ ಲೂಟಿ ಮಾಡಿದೆ ಕಾಂಗ್ರೆಸ್: ಮೋದಿ |News Mirchi

ಆಯ್ದ ಉದ್ಯಮಿಗಳಿಗೆ ಬ್ಯಾಂಕ್ ಸಾಲ ಕೊಡಿಸಿ ಜನರ ಹಣ ಲೂಟಿ ಮಾಡಿದೆ ಕಾಂಗ್ರೆಸ್: ಮೋದಿ

ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೆಲ ಆಯ್ದ ಕೈಗಾರಿಕೋದ್ಯಮಿಗಳಿಗೆ ಬ್ಯಾಂಕುಗಳಿಂದ ಸಾಲ ನೀಡುವಂತೆ ಒತ್ತಡ ಹೇರಿದೆ. ಇದು ದೇಶದ ಆರ್ಥಿಕ ವ್ಯವಸ್ಥೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಇದು ಯುಪಿಎ ಅವಧಿಯಲ್ಲಿ ನಡೆದ ಅತಿ ದೊಡ್ಡ ಹಗರಣವಾಗಿದ್ದು, 90 ಇದು ಮುಂದೆ 2ಜಿ ಮತ್ತು ಕಲ್ಲಿದ್ದಲು ಹಗರಣಗಳಿಗಿಂತಲೂ ದೊಡ್ಡ ಹಗರಣ ಎಂದು ಹೇಳಿದ್ದಾರೆ.

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ದಾಖಲೆಯ ಆದಾಯ

ಕೆಲ ಆಯ್ದ ಕೈಗಾರಿಕೋದ್ಯಮಿಗಳಿಗೆ ಕಾಂಗ್ರೆಸ್ ಸರ್ಕಾರ ಸಾಲ ನೀಡುವ ಮೂಲಕ ಜನರ ದುಡ್ಡನ್ನು ಲೂಟಿ ಮಾಡಲಾಗಿದೆ ಎಂದು ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಎಫ್ಐಸಿಸಿಐ) ಯ 90ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ದೇಶ ಲೂಟಿಯಾಗುತ್ತಿದ್ದಾಗ ಎಲ್ಲಿತ್ತು ನಿಮ್ಮ ಕೋಪ: ಅಮಿತ್ ಶಾ

ಹಿಂದಿನ ಸರ್ಕಾರ ತಪ್ಪು ಮಾಡುತ್ತಿದೆ ಎಂದು ಜನರಿಗೆ ತಿಳಿದಿತ್ತು, ಉದ್ಯಮಿಗಳಿಗೆ ತಿಳಿದಿತ್ತು ಹಾಗೆಯೇ ಬ್ಯಾಂಕುಗಳಿಗೂ ತಿಳಿದಿತ್ತು. ಆ ಸಂದರ್ಘದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆಗುತ್ತಿದ್ದ ಬದಲಾವಣೆಗಳ ಕುರಿತು ಎಫ್ಐಸಿಸಿಐ ಸಮೀಕ್ಷೆ ನಡೆಸಿ ಜನರನ್ನು ಎಚ್ಚರಿಸುವ ಕೆಲಸ ಮಾಡಿತ್ತಾ? ಎಂದು ಪ್ರಶ್ನಿಸಿದ ಮೋದಿ, ಎಫ್ಐಸಿಸಿಐ ನಂತಹ ಸಂಸ್ಥೆಗಳು ಇಂತಹ ಹಗರಣಗಳನ್ನು ಬಯಲಿಗೆಳೆದು ಜನರ ಗಮನಕ್ಕೆ ತರುವಲ್ಲಿ ಸಕ್ರಿಯ ಪಾತ್ರವಹಿಸಬೇಕು ಎಂದು ಸಲಹೆ ನೀಡಿದರು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!