ಇಂದು ವಿಶ್ವ ಆಹಾರ ಮೇಳಕ್ಕೆ ಪ್ರಧಾನಿಯಿಂದ ಚಾಲನೆ – News Mirchi

ಇಂದು ವಿಶ್ವ ಆಹಾರ ಮೇಳಕ್ಕೆ ಪ್ರಧಾನಿಯಿಂದ ಚಾಲನೆ

ಭಾರತದಲ್ಲಿ ನಡೆಯಲಿರುವ ‘ವರ್ಲ್ಡ್ ಫುಡ್ ಇಂಡಿಯಾ’ ಮೇಳವನ್ನು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಲಿದ್ದಾರೆ. ಶುಕ್ರವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ.

ಕೇಂದ್ರ ಸಚಿವ ಹರ್ ಸಿಮ್ರತ್ ಕೌರ್ ಬಾದಲ್ ನೇತೃತ್ವದಲ್ಲಿ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರೀಸ್ ಇಲಾಖೆ ಮೂರು ದಿನಗಳ ಕಾಲ ಈ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಿದೆ. ವಿಶ್ವದ ವಿವಿಧೆಡೆಗಳಿಂದ ಹಲವು ಉದ್ಯಮಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದು, ಕೇಂದ್ರ ಸರ್ಕಾರ ಭಾರೀ ಪ್ರಮಾಣದ ಹೂಡಿಕೆಗಳನ್ನು ನಿರೀಕ್ಷಿಸುತ್ತಿದೆ. ಜರ್ಮನಿ, ಜಪಾನ್, ನೆದರ್ಲ್ಯಾಂಡ್, ಇಟಲಿ ಮುಂತಾದ ದೇಶಗಳು ಇದರಲ್ಲಿ ಪಾಲ್ಗೊಳುತ್ತವೆ. ಫುಡ್ ಪ್ರೊಸೆಸಿಂಗ್ ವಲಯದ ಮೂಲಕ ಇಂತಹ ಕಾರ್ಯಕ್ರಮವನ್ನು ಭಾರತ ಆಯೋಜಿಸುತ್ತಿರುವುದು ಇದೇ ಮೊದಲ ಬಾರಿ. ಆಹಾರ ಉತ್ಪನ್ನಗಳ ಮೂಲಕ ಆರ್ಥಿಕ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದರೆ ಮಾತ್ರ ಸುಮಾರು 10 ಬಿಲಿಯನ್ ವರೆಗೆ ಸೆಳೆಯಬಹುದು ಎಂದು ಅಂದಾಜಿಸಲಾಗಿದೆ.

ಆಹಾರ ಉತ್ಸವವನ್ನು ಆರಂಭಿಸಿದ ನಂತರ ನ್ಯಾಷನಲ್ ಸ್ಟೇಡಿಯಂ ನಲ್ಲಿನ ಇಂಡಿಯಾ ಗೇಟ್ ಲಾನ್ ನಲ್ಲಿ ಸ್ಥಾಪಿಸುವ ಫುಡ್ ಸ್ಟಾಲ್ ಗಳನ್ನು ಮೋದಿ ಪರಿಶೀಲಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಸಾದ್ವಿ ನಿರಂಜನ್ ಸೇರಿದಂತೆ, ತೆಲಂಗಾಣ, ಆಂದ್ರಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಚತ್ತೀಸ್ಗಢ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಾರೆ. ಒಟ್ಟು 30 ದೇಶಗಳು, 200 ಕಂಪನಿಗಳಿಗೆ ಸೇರಿದ 2 ಸಾವಿರ ಜನ ಈ ಕಾರ್ಯಕ್ರಮದಲ್ಲಿ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸಲಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...