ಮನೆ ಕಟ್ಟಿಸಿಕೊಳ್ಳಲು ನೇರವಾಗಿ ಖಾತೆಗೆ ರೂ.1.5 ಲಕ್ಷ – News Mirchi

ಮನೆ ಕಟ್ಟಿಸಿಕೊಳ್ಳಲು ನೇರವಾಗಿ ಖಾತೆಗೆ ರೂ.1.5 ಲಕ್ಷ

ಮನೆಗಳು ಮಾತ್ರವಲ್ಲದೆ ಮುಂದಿನ ಹಣಕಾಸು ವರ್ಷದಲ್ಲಿ ಸುಮಾರಿ 44 ಲಕ್ಷ ಜನರಿಗೆ ಮನೆಗಳ ಜೊತೆ ಅಡುಗೆ ಅನಿಲ, ವಿದ್ಯುತ್ ಸಂಪರ್ಕ ಮತ್ತು ನೀರಿನ ಸಂಪರ್ಕ ಒದಗಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಗುಡ್ಡಗಾಡು ಮತ್ತು ಬಯಲು ಪ್ರದೇಶಗಳಲ್ಲಿ ವಾಸಿಸುವವರ ಖಾತೆಗಳಿಗೆ ಕ್ರಮವಾಗಿ ಕೇಂದ್ರ ಸರ್ಕಾರ ರೂ. 1.30 ಲಕ್ಷ ಮತ್ತು 1.50 ಲಕ್ಷ ರೂಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಪಾವತಿ ಮಾಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಅಮರ್ ಜೀತ್ ಸಿನ್ಹಾ ಹೇಳಿದ್ದಾರೆ.

ಇದರ ಜೊತೆಗೆ ಫಲಾನುಭವಿಗಳು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ರೂ.12,000 ಮತ್ತು ತಮ್ಮ ಮನೆಗಳನ್ನು ನಿರ್ಮಿಸಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೂ. 18,000 ನೀಡಲಾಗುವುದು ಎಂದರು.

ಇದಕ್ಕೂ ಮುನ್ನ 33 ಲಕ್ಷ ಜನರಿಗೆ ಮನೆ ನಿರ್ಮಿಸಿಕೊಡಲು ಉದ್ದೇಶಿಸಲಾಗಿತ್ತು. ಅದನ್ನು ಈಗ 44 ಲಕ್ಷಕ್ಕೆ ಏರಿಸಲಾಗಿದೆ. ಪ್ರಧಾನ ಮಂತ್ರಿಗಳು ಜನರ ಜೀವನ ಮಟ್ಟವನ್ನು ಸುಧಾರಿಸಲು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಮನೆ ಇಲ್ಲದವರಿಗೆ ಆಯಾ ರಾಜ್ಯ ಸರ್ಕಾರಗಳು ಪಲಾನುಭವಿಗಳ ಹೆಸರಿಗೆ ಜಾಗ ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ ಎಂದರು.

ಮನೆ ಪಡೆಯುವ ಫಲಾನುಭವಿಗಳಲ್ಲಿ ಶೇ. 60 ರಷ್ಟು ಜನ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಫಲಾನುಭವಿಗಳಲ್ಲದವರ ಹೆಸರಿನಲ್ಲಿ ಹಣ ದುರುಪಯೋಗವಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.

Loading...

Leave a Reply

Your email address will not be published.