ರಾಹುಲ್ ಗೆ ಜನ್ಮ ದಿನ ಶುಭಾಶಯ ತಿಳಿಸಿದ ಮೋದಿ

47 ನೇ ವರ್ಷಕ್ಕೆ ಕಾಲಿಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯವರಿಗೆ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. “ಕಾಂಗ್ರೆಸ್ ಉಪಾಧ್ಯಕ್ಷರಿಗೆ ಜನ್ಮ ದಿನದ ಶುಭಾಶಯಗಳು, ಶ್ರೀ ರಾಹುಲ್ ಗಾಂಧಿಯವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ತಮ್ಮ ಅಜ್ಜಿಯನ್ನು ಭೇಟಿ ಮಾಡಲು ಮಂಗಳವಾರ ವಿದೇಶಕ್ಕೆ ಹಾರಿರುವ ರಾಹುಲ್ ಗಾಂಧಿ, ಸ್ವಲ್ಪ ಕಾಲ ತಮ್ಮ ಅಜ್ಜಿಯೊಂದಿಗೆ ಕಾಲ ಕಳೆದು ಹಿಂದಿರುವುದಾಗಿ ಹೇಳಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಹುಲ್ ಜನ್ಮದಿನವನ್ನು “ಸಂಕಲ್ಪ ದಿನ” ಎಂಬ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಇಂದು ಪಕ್ಷದ ನಾಯಕರು ಲಕ್ನೋದಲ್ಲಿ ವಿವಿಧ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಿ, ಅನಾಥಾಶ್ರಮಗಳಲ್ಲಿನ ಮಕ್ಕಳೊಂದಿಗೆ ಊಟ ಮಾಡಲಿದ್ದಾರೆ.

Loading...
error: Content is protected !!