Big Breaking News

ದೇಶ ಸೇವೆಗಾಗಿ ಮನೆ ಬಿಟ್ಟು ಬಂದೆ : ಭಾವುಕರಾದ ಮೋದಿ

ಎರಡು ಪ್ರಮುಖ ಯೋಜನೆಗಳ ಶಂಕುಸ್ಥಾಪನೆಗಾಗಿ ಗೋವಾ ಪ್ರವಾಸದಲ್ಲಿರುವ ಪ್ರಧಾನಿ ಭಾವುಕರಾಗಿ ಭಾಷಣ ಮಾಡಿದರು. ಹಳೆಯ ನೋಟು ರದ್ದು ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬ ಪ್ರಜೆಯೂ ಪ್ರಾಮಾಣಿಕವಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು. ನವೆಂಬರ್ 8 ರಂದು ಹಲವಾರು ಜನ ನೆಮ್ಮದಿಯಿಂದ ನಿದ್ದೆ ಮಾಡಿದರು. ಆದರೆ ಕೆಲವರಿಗೆ ಮಾತ್ರ ಇದುವರೆಗೂ ನೆಮ್ಮದಿಯ ನಿದ್ದೆಯಿಲ್ಲ ಎಂದು ಪರೋಕ್ಷವಾಗಿ ಹೊಂದಿರುವವರನ್ನು ಚುಚ್ಚಿದರು.

Download Free

ಚಿನ್ನಾಭರಣ ಖರೀದಿಸಲು ಪಾನ್ ಕಾರ್ಡ್ ಕಡ್ಡಾಯ ಮಾಡದಂತೆ ಹಲವು ಸಂಸದರು ತಮ್ಮನ್ನು ಒತ್ತಾಯಿಸಿದರು ಎಂದು ತಿಳಿದರೆ ನೀವು ಆಶ್ಚರ್ಯಗೊಳ್ಳುವಿರಿ ಎಂದು ಮೋದಿ ಹೇಳಿದರು. ಉನ್ನತ ಹುದ್ದೆಗೇರಲು, ದೊಡ್ಡ ಕುರ್ಚಿಯಲ್ಲಿ ಕೂರಲು ತಾನು ಹುಟ್ಟಿಲ್ಲ, ದೇಶ ಸೇವೆಗಾಗಿ ಕುಟುಂಬವನ್ನು, ಮನೆಯನ್ನು ಬಿಟ್ಟು ಬಂದಿದ್ದೇನೆ ಎಂದು ಹೇಳುವ ಸಂದರ್ಭದಲ್ಲಿ ಭಾವುಕರಾದರು.

ಕಪ್ಪು ಹಣವನ್ನು ನಿಯಂತ್ರಿಸಲು ಪ್ರಜೆಗಳು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ತಾವು ತೆಗೆದುಕೊಂಡ ತೀರ್ಮಾನ ದೇಶದಲ್ಲಿ ಯಾವ ಬದಲಾವಣೆ ತರುತ್ತದೆ ಎಂಬುದು ನನಗೆ ತಿಳಿದಿದೆ, ನನಗೆ ಬೆಂಬಲಿಸಿದ ದೇಶದ ಜನತೆಗೆ ಏನು ನೀಡಿದರೂ ಸಾಲದು. ಕಪ್ಪು ಹಣದ ವಿರುದ್ಧದ ಹೋರಾಟದಲ್ಲಿ ಇದು ಮೊದಲ ಹೆಜ್ಜೆ. ಬೇನಾಮಿ ಆಸ್ತಿ ಹೊಂದಿರುವವರು ಶಿಕ್ಷೆ ಅನುಭವಿಸಲು ಸಿದ್ಧರಾಗಿರಬೇಕು ಎಂದು ಎಚ್ಚರಿಸಿದರು.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache