ಗೋವುಗಳನ್ನು ರಕ್ಷಿಸುವ ಯತ್ನದಲ್ಲಿ ಹಿಂಸೆ ಸರಿಯಲ್ಲ: ಮೋಹನ್ ಭಾಗವತ್ |News Mirchi

ಗೋವುಗಳನ್ನು ರಕ್ಷಿಸುವ ಯತ್ನದಲ್ಲಿ ಹಿಂಸೆ ಸರಿಯಲ್ಲ: ಮೋಹನ್ ಭಾಗವತ್

ನವದೆಹಲಿ: ಗೋವುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಹಿಂಸೆಗೆ ಇಳಿಯುವುದು ಸರಿಯಲ್ಲ, ಹೀಗೆ ಮಾಡುವುದರಿಂದ ನಿಜವಾದ ಉದ್ದೇಶಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಗೋಹತ್ಯೆ ಪಾಪ, ಅದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ರಾಜಸ್ಥಾನದಲ್ಲಿ ಆಳ್ವಾರ್ ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಗೋರಕ್ಷಕರ ದಾಳಿಯಿಂದ ಸಾವನ್ನಪ್ಪಿದ ಮಾಡಿದ ಘಟನೆ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದಾರೆ. ಮಹಾವೀರ್ ಜಯಂತಿ ಪ್ರಯುಕ್ತ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಭಾಗವತ್ ಮಾತನಾಡಿದರು. ಕಾನೂನು, ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತಾ ಗೋರಕ್ಷಣಾ ಕಾರ್ಯದಲ್ಲಿ ಮತ್ತಷ್ಟು ಜನರನ್ನು ಕರೆತರುವ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಗೋವುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಯಾವುದೇ ರೀತಿಯ ಹಿಂಸೆಗೆ ಇಳಿಯಬಾರದು ಎಂದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈಗಾಗಲೇ ಗೋಹತ್ಯೆ ನಿಷೇಧವಿದೆ. ಉಳಿದ ರಾಜ್ಯಗಳೂ ಹೀಗೇ ಮಾಡುತ್ತವೆಯೆಂಬ ವಿಶ್ವಾಸವಿದೆ. ದೇಶಾದ್ಯಂತ ಇಂತಹ ನಿಷೇಧವಿರಬೇಕು, ಇಂತಹ ಕಾನೂನು ತರಲು ಸ್ವಲ್ಪ ಸಮಯ ಬೇಕಾಗುತ್ತದೆ. ಹಿಂಸೆ ನೀಡುವಂತೆ ಯಾವುದೇ ಕಾನೂನು ಹೇಳುವುದಿಲ್ಲ, ಗೋಹತ್ಯೆ ನಿಷೇಧವಿದ್ದರೆ ಅಹಿಂಸೆಗೆ ಸ್ವಲ್ಪ ಬಲ ಬರುತ್ತದೆ. ಕಾನೂನು ಇದ್ದರೂ, ಇಲ್ಲದಿದ್ದರೂ ಸಮಾಜದ ರೀತಿ ಬದಲಾದರೆ ಗೋಹತ್ಯೆ ನಿಲ್ಲುತ್ತದೆ. ಗೋವು ಎಷ್ಟು ಬೆಲೆಯುಳ್ಳದ್ದೋ ಒಬ್ಬ ಪಶುವೈದ್ಯನಾದ ನನಗೆ ಚೆನ್ನಾಗಿ ತಿಳಿದಿದೆ ಎಂದರು. ದೇಶೀಯ ತಳಿಯ ಹಸುಗಳ ಮೂತ್ರ, ಸಗಣಿ ತುಂಬಾ ಉಪಯೋಗಕ್ಕೆ ಬರುತ್ತದೆ ಎಂದರು.

Loading...
loading...
error: Content is protected !!