ಮೋಹನ್ ಭಾಗವತ್ ಹೇಳಿಕೆಗೆ ರಾಹುಲ್ ಆಕ್ರೋಶ

ಸೇನೆ ಕುರಿತು ನೀಡಿರುವ ಹೇಳಿಕೆಗೆ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಅವರು ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ನಿಮ್ಮ ಹೇಳಿಕೆ ನಾಚಿಕೆಗೇಡು, ನಿಮ್ಮ ಹೇಳಿಕೆ ಪ್ರತಿ ಭಾರತೀಯನಿಗೂ ಅವಮಾನ ಮಾಡುವಂತಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಮೋಹನ್ ಭಾಗವತ್ ಹೇಳಿಕೆ ಭಾರತದ ಪ್ರಜೆಗಳಿಗಾಗಿ ಜೀವ ಅರ್ಪಿಸಿದ ಸೈನಿಕರನ್ನು ಅಗೌರವಿಸದಂತೆ ಇದೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಅಗತ್ಯ ಬಿದ್ದರೆ ದೇಶಕ್ಕಾಗಿ ಗಡಿಯಲ್ಲಿ ನಿಂತು ಹೋರಾಡಲು ಆರ್.ಎಸ್.ಎಸ್ ಸಿದ್ಧ

ಅಗತ್ಯ ಬಿದ್ದರೆ ದೇಶಕ್ಕಾಗಿ ಹೋರಾಡಲು ಆರ್.ಎಸ್.ಎಸ್ ಸಿದ್ಧ. ಯುದ್ಧಕ್ಕೆ ಸಿದ್ಧರಾಗಲು ಆರ್.ಎಸ್.ಎಸ್ ಗೆ ಮೂರ ಮೂರು ದಿನಗಳು ಸಾಕು. ಆದರೆ ಸೇನೆಗೆ ಕನಿಷ್ಠ 6 ತಿಂಗಳು ಬೇಕಾಗುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದರು. ಸೇನೆಗೆ 6 ತಿಂಗಳು ಬೇಕಾಗುತ್ತದೆ ಎಂಬ ಮಾತೇ ಈಗ ವಿವಾದಕ್ಕೆ ಕಾರಣವಾಗಿದೆ.

ರಾಹುಲ್ ಗೆ ಬೀದರ್ ಬಂದ್ ಮೂಲಕ ಸ್ವಾಗತ

ಇನ್ನು ಮೋಹನ್ ಭಾಗವತ್ ಅವರ ಮಾತುಗಳನ್ನು ತಿರುಚಲಾಗಿದೆ ಎಂದು ಆರ್.ಎಸ್.ಎಸ್ ಹೇಳಿದೆ. ದೇಶಕ್ಕೆ ಸೇನೆಯ ಅವಶ್ಯಕತೆ ಬಿದ್ದರೆ ಆರ್.ಎಸ್.ಎಸ್ ಕಾರ್ಯಕರ್ತರಿಗೆ ಮೂರು ದಿನಗಳಲ್ಲಿ ತರಬೇತಿ ನೀಡಿ ದೇಶ ರಕ್ಷಣೆಗಾಗಿ ಕಳುಹಿಸುವ ಸಾಮರ್ಥ್ಯವಿದೆ ಎಂದು ಭಾಗವತ್ ಅವರು ಹೇಳಿದ್ದರು ಎಂದು ಆರ್.ಎಸ್.ಎಸ್ ಸ್ಪಷ್ಟಪಡಿಸಿದೆ. ಬಿಹಾರದಲ್ಲಿ ನಡೆದ ಆರ್.ಎಸ್.ಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವತ್ ಈ ಹೇಳಿಕೆ ನೀಡಿದ್ದರು.

Get Latest updates on WhatsApp. Send ‘Subscribe’ to 8550851559