ಉತ್ತರಪ್ರದೇಶದಲ್ಲಿ ಕಸಾಯಿಖಾನೆ ಬಂದ್, ಕ್ರಿಕೆಟರ್ ಮೊಹಮದ್ ಕೈಫ್ ಏನಂದ್ರು ಗೊತ್ತೇ?

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ನಂತರ ಅಲ್ಲಿನ ಕಸಾಯಿಖಾನೆಗಳನ್ನು ಮುಚ್ಚಿಸುತ್ತಿರುವುದು ನಮಗೆಲ್ಲಾ ತಿಳಿದದ್ದೇ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟರ್ ಮೊಹಮದ್ ಕೈಪ್ ಯೋಗಿ ಆದಿತ್ಯನಾಥ್ ರವರ ನಿಲುವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದಾರೆ. ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿಸುತ್ತಿರುವುದರಿಂದ ದನದ ಮಾಂಸ ಕೊರತೆ ಉಂಟಾಗಿ ಲಕ್ನೋದಲ್ಲಿನ ಪ್ರಸಿದ್ಧ “ತುಂಡೇ ಕಬಾಬ್” ಎಂಬ ಕಬಾಬ್ ಸೆಂಟರ್ ನ ವ್ಯಾಪಾರ ಕುಸಿದಿದೆ ಎಂದು ಅದರ ಮಾಲೀಕ ಇತ್ತೀಚೆಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೊಹಮದ್ ಕೈಫ್ “ತುಂಡೇ ಮಿಲೇ ಯಾ ನಾ ಮಿಲೇ… ಗೂಂಡೇ ನಾ ಮಿಲೇ” ಎಂದು ಹೇಳಿದ್ದಾರೆ.

ತುಂಡೇ ಕಬಾಬ್ ಸಿಕ್ಕರೂ ಸಿಗದಿದ್ದರೂ, ಗೂಂಡಾಗಳು ಇಲ್ಲದ ಉತ್ತರಪ್ರದೇಶವನ್ನು ನೋಡಲು ಬಯಸುತ್ತೇನೆ. ಅಕ್ರಮ ಚಟುವಟಿಕೆಗಳೆಲ್ಲಾ ನಿಲ್ಲಬೇಕು. ಯೋಗಿ ಆದಿತ್ಯನಾಥ್ ಅವರದ್ದು ಒಳ್ಳೆಯ ನಡೆ ಎಂದು ಹೇಳಿದ್ದಾರೆ.