ಒಂದೆರಡಲ್ಲ, ಒಟ್ಟು 52 ಸೆಕ್ಸ್ ವೀಡಿಯೋಗಳು!

ಅಹಮದಾಬಾದ್, ನವೆಂಬರ್-17: ಗುಜರಾತ್ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಪ್ರಚಾರ ನಡೆಸುತ್ತಿರುವ ಪಟೀದಾರ್ ಆಂದೋಲನ್ ಸಮಿತಿ ನಾಯಕ ಹಾರ್ಧಿಕ್ ಪಟೇಲ್ ಗೆ ಸಂಬಂಧಿಸಿದ ಎರಡು ಸೆಕ್ಸ್ ಕ್ಲಿಪ್ ಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಆದರೆ ಅವು ಕೇವಲ ಮಾರ್ಫಿಂಗ್ ಮಾಡಿದ ವೀಡಿಯೋಗಳಾಗಿದ್ದು, ಬಿಜೆಪಿ ತನಗೆ ಕೆಟ್ಟ ಹೆಸರು ತರಲು ಹೀಗೆ ಮಾಡುತ್ತಿದೆ ಎಂದು ಹಾರ್ಧಿಕ್ ಪಟೇಲ್ ಅಮಾಯಕನಂತೆ ಪೋಸು ನೀಡುತ್ತಿದ್ದಾರೆ. ಆದರೂ ಗುಜರಾತ್ ನಲ್ಲಿ ಈ ವೀಡಿಯೋಗಳ ಕುರಿತು ಬಿಸಿ ಬಿಸಿ ಚರ್ಚೆ ಮುಂದುವರೆದಿದೆ.

ಒಂದಲ್ಲ ಎರಡಲ್ಲ ಒಟ್ಟು 52 ವೀಡಿಯೋಗಳು

ಸೆಕ್ಸ್ ಸಿಡಿಗಳ ಕುರಿತು ಪಟೀದಾರ್ ಗ್ರೂಪ್ ಕನ್ವೀನರ್ ದಿನೇಶ್ ಬಂಭಾನಿಯಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ನೀಚ ತಂತ್ರಗಳನ್ನು ಅನುಸರಿಸುತ್ತಿದೆ. ಎರಡು ಸಿಕ್ಸ್ ಸಿಡಿಗಳು ಮಾತ್ರವಲ್ಲ, ಬಿಜೆಪಿ ಬಳಿ ಒಟ್ಟು 52 ವೀಡಿಯೋಗಳಿದ್ದು, ಅವುಗಳಲ್ಲಿ ಹಾರ್ಧಿಕ್ ಪಟೇಲ್ ಗೆ ಸಂಬಂಧಿಸಿದ 22 ವೀಡಿಯೋಗಳು, ಇತರೆ ಪಟೀದಾರ್ ನಾಯಕರ ಮೇಲೆ 30 ಮಾರ್ಫಿಂಗ್ ಅಶ್ಲೀಲ ವೀಡಿಯೋಗಳನ್ನು ಬಿಜೆಪಿ ನಾಯಕರು ತಯಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹಾರ್ಧಿಕ ಪಟೇಲ್ ಗೆ ಮಾನ ಹಾನಿ ಮಾಡಲು ಬಿಜೆಪಿ ಆತನದೆಂದು ಸೆಕ್ಸ್ ವೀಡಿಯೋಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪಟೀದಾರ್ ಸಮುದಾಯವನ್ನು ಎದುರಿಸಲಾರದೆ ಬಿಜೆಪಿ ನೀಚ ರಾಜಕಾರಣಕ್ಕೆ ಇಳಿದಿದೆ ಎಂದು ಬಂಭಾನಿಯಾ ಆರೋಪಿಸಿದ್ದಾರೆ.

Get Latest updates on WhatsApp. Send ‘Add Me’ to 8550851559