ಮೋದಿ ಅಧಿಕಾರಾವಧಿಯಲ್ಲಿ ಕುಸಿದ ಉಗ್ರರ ಚಟುವಟಿಕೆಗಳು |News Mirchi

ಮೋದಿ ಅಧಿಕಾರಾವಧಿಯಲ್ಲಿ ಕುಸಿದ ಉಗ್ರರ ಚಟುವಟಿಕೆಗಳು

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗಿವೆ. ಹಾಗೆಯೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಅಧಿಕಾರಾವಧಿಗೆ ಹೋಲಿಸಿದರೆ ಮೋದಿ ಆಡಳಿತದಲ್ಲಿ ಹೆಚ್ಚು ಪ್ರಮಾಣದಲ್ಲಿ ಉಗ್ರರನ್ನು ಕೊಲ್ಲಲಾಗಿದೆ. ಇದೇ ವಿಷಯವನ್ನು ಅಂಕಿ ಅಂಶಗಳು ಸಾಬೀತುಪಡಿಸುತ್ತಿವೆ.

ಮನಮೋಹನ್ ಸಿಂಗ್ ಆಡಳಿತಾವಧಿ 2010 ರಿಂದ 2013 ರ ನಡುವೆ ಜಮ್ಮೂ ಕಾಶ್ಮೀರದಲ್ಲಿ ಒಟ್ಟು 1218 ಭಯೋತ್ಪಾದಕ ಘಟನೆಗಳು ನಡೆದಿವೆ. ಅದೇ ಮೋದಿ ಅಧಿಕಾರಕ್ಕೆ ಬಂದ 2014 ರಿಂದ 2017 ರ ನಡುವೆ ಕೇವಲ 1094 ಘಟನೆಗಳು ಮಾತ್ರ ನಡೆದಿವೆ. 2014 ರಿಂದ ಇಲ್ಲಿಯವರೆಗೂ ಭದ್ರತಾ ಪಡೆಗಳು 580 ಉಗ್ರರನ್ನು ಕೊಂದಿದ್ದರೆ, ಮನಮೋಹನ್ ಸಿಂಗ್ ಅವಧಿಯಲ್ಲಿ ಕೊನೆಯ ನಾಲ್ಕು ವರ್ಷಗಳಲ್ಲಿ 471 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ಭಯೋತ್ಪಾದಕ ಘಟನೆಗಳಲ್ಲಿ ಕಾಶ್ಮೀರ ನಾಗರಿಕರ ಸಾವು ಕೂಡಾ ಯುಪಿಯೆ ಅವಧಿಗೆ ಹೋಲಿಸಿದರೆ ಎನ್.ಡಿ.ಎ ಅವಧಿಯಲ್ಲಿ ಕಡಿಮೆಯಾಗಿ ದಾಖಲಾಗಿವೆ. ಯುಪಿಎ ಕೊನೆಯ ನಾಲ್ಕು ವರ್ಷಗಳಲ್ಲಿ 100 ನಾಗರಿಕರು ಸಾವನ್ನಪ್ಪಿದ್ದರೆ, ಎನ್.ಡಿ.ಎ ಅವಧಿಯಲ್ಲಿ ಸಾವನ್ನಪ್ಪಿದ ನಾಗರಿಕರ ಸಂಖ್ಯೆ 92.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!