ಬಿಜೆಪಿ ಯುವನಾಯಕನ ಕಾರಿನಲ್ಲಿ 20 ಲಕ್ಷ ಮೌಲ್ಯದ ಹೊಸ ನೋಟು! – News Mirchi
We are updating the website...

ಬಿಜೆಪಿ ಯುವನಾಯಕನ ಕಾರಿನಲ್ಲಿ 20 ಲಕ್ಷ ಮೌಲ್ಯದ ಹೊಸ ನೋಟು!

ಸೇಲಂ: ತಮಿಳುನಾಡಿನ ಬಿಜೆಪಿ ಯುವ ನಾಯಕರೊಬ್ಬರ ಕಾರಿನಲ್ಲಿ ರೂ.20 ಲಕ್ಷ ಮೌಲ್ಯದ ಹಣ ಪತ್ತೆಯಾಗಿದ್ದು, ಅದರಲ್ಲಿ 900 ಕ್ಕೂ ಹೆಚ್ಚು 2000 ರೂಪಾಯಿಗಳ ನೋಟುಗಳಿವೆ‌.

ಸೇಲಂ ಜಿಲ್ಲಾ ಬಿಜೆಪಿ ಯುವ ವಿಭಾಗದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಜೆವಿಆರ್ ಅರುಣ್, ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಧಾನಿಯವರ ನೋಟು ರದ್ದು ಕ್ರಮವನ್ನು ಸ್ವಾಗತಿಸುತ್ತಿರುವುದಾಗಿ ಬರೆದುಕೊಂಡಿದ್ದರು. ನಮ್ಮ ದೇಶದ ಅಭಿವೃದ್ಧಿಗಾಗಿ ಸಾಲಿನಲ್ಲಿ ನಿಲ್ಲೋಣ ಎಂದು ಕರೆ ನೀಡಿದ್ದರು. ಆದರೆ, ಸೇಲಂ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾನ್ಯ ಚೆಕಿಂಗ್ ನಲ್ಲಿಯೇ ಅವರು ಸಿಕ್ಕಿಬಿದ್ದಿದ್ದಾರೆ.

ಅವರ ಕಾರಿನಿಂದ ರೂ.20.5 ಲಕ್ಷ ಮೌಲ್ಯದ ನೋಟಿನ ಕಂತೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ 2 ಸಾವಿರ ಮುಖಬೆಲೆಯ ನೋಟುಗಳು 900, 100 ರೂಪಾಯಿ ನೋಟುಗಳು 1530, 50 ರೂ.ನೋಟುಗಳು 1000 ಸಿಕ್ಕಿವೆ. ಹಣದ ಮೂಲದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಪೊಲೀಸರು ಈ ವಿಷಯವನ್ನು ಆದಾಯ ತೆರಿಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಹೊಸ ನೋಟು ವಿನಿಮಯದಲ್ಲಿ ಸಹಕರಿಸಿದ್ದರಾ? ಕಮೀಷನ್ ನೀಡಿ ಹೊಸ ನೋಟು ಪಡೆದರಾ? ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ವಿವರಣೆ ನೀಡುವಂತೆ ರಾಜ್ಯ ಬಿಜೆಪಿ ಆತನಿಗೆ ಶೋಕಾಸ್ ನೋಟೀಸ್ ನೀಡಿದ್ದು, ಆತನನ್ನು ಪಕ್ಷದಿಂದ ಬಹಿಷ್ಕರಿಸುತ್ತಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ತಮಿಳಿಸೈ ಸೌಂದರರಾಜನ್ ಹೇಳಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!