ಮತ್ತೆರಡು ಚಾನೆಲ್ ಪ್ರಸಾರ ಸ್ಥಗಿತ – News Mirchi

ಮತ್ತೆರಡು ಚಾನೆಲ್ ಪ್ರಸಾರ ಸ್ಥಗಿತ

ನವದೆಹಲಿ: ‘ಎನ್ಡಿಟಿವಿ ಇಂಡಿಯಾ’ ಚಾನೆಲ್ ಗೆ ಕೇಂದ್ರ ವಿಧಿಸಿರುವ ಒಂದು ದಿನದ ನಿಷೇಧಕ್ಕೆ ವಿರೋಧ ಪಕ್ಷಗಳು ವಿರೋಧಿಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೆರಡು ಚಾನೆಲ್ ಪ್ರಸಾರಕ್ಕೆ ನಿಷೇಧ ಹೇರಿದೆ. ‘ನ್ಯೂಸ್ ಟೈಂ ಅಸ್ಸಾಂ’ ಸುದ್ದಿ ವಾಹಿನಿ ಹಲವು ಬಾರಿ ನಿಬಂಧನೆಗಳನ್ನು ಉಲ್ಲಂಘಿಸಿ, ಕ್ಷಮೆಯಾಚಿಸಿ ಪ್ರಸಾರ ಮಾಡುವಂತೆ ಸೂಚಿಸಿದ್ದರೂ ಮಾಡಿರಲಿಲ್ಲ. ಹೀಗಾಗಿ ನವೆಂಬರ್ 9 ರ ಮಧ್ಯ ರಾತ್ರಿಯಿಂದ 10 ರ ಮಧ್ಯರಾತ್ರಿಯವರೆಗೆ 24 ಗಂಟೆಗಳ ಕಾಲ ಆ ಚಾನೆಲ್ ಪ್ರಸಾರ ನಿಲ್ಲಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ಜಾರಿ ಮಾಡಿದೆ.

ಮಾಲೀಕನ ಕೈಯಲ್ಲಿ ಚಿತ್ರಹಿಂಸೆಗೆ ಗುರಿಯಾದ ಬಾಲಕಿಯ ವಿವರ ತಿಳಿಯುವಂತೆ ಈ ಚಾನೆಲ್ ಪ್ರಸಾರ ಮಾಡಿ, ಆಕೆಯ ಗೌರವಕ್ಕೆ ಧಕ್ಕೆ ತಂದಿದೆ ಎಂದು ಸಚಿವಾಲಯ ಹೇಳಿದೆ. 2013 ರಲ್ಲೇ ಚಾನೆಲ್ ಗೆ ನಿಷೇಧ ಹೇರಬೇಕು ಎಂದು ಕೇಂದ್ರ ಆದೇಶಿಸಿದ್ದರೂ ಆಗ ಅದು ಜಾರಿಯಾಗಿರಲಿಲ್ಲ.

ಮತ್ತೊಂದು ಚಾನೆಲ್ ‘ಕೇರ್ ವರ್ಲ್ಡ್ ಟಿವಿ’ ಎಂಬ ಚಾನೆಲ್ ಆಕ್ಷೇಪಾರ್ಹ ದೃಶ್ಯಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನವೆಂಬರ್ 9 ರಿಂದ ಒಂದು ವಾರ ಆ ಚಾನೆಲ್ ಪ್ರಸಾರ ನಿಷೇಧಿಸಿದೆ.

Loading...

Leave a Reply

Your email address will not be published.