ವಿಶ್ವದ ಪ್ರಬಲ ಭಾಷೆಗಳು ಇವೇ… – News Mirchi
We are updating the website...

ವಿಶ್ವದ ಪ್ರಬಲ ಭಾಷೆಗಳು ಇವೇ…

ವಿಶ್ವದಲ್ಲಿ ಇಂದು ಆರು ಸಾವಿರ ಭಾಷೆಗಳನ್ನು ಜನ‌ಮಾತನಾಡುತ್ತಿದ್ದಾರೆ. ಅವುಗಳಲ್ಲಿ ಎರಡು ಸಾವಿರ ಭಾಷೆಗಳನ್ನು ಮಾತನಾಡುವವರು ಒಂದು ಸಾವಿರಕ್ಕೂ ಕಡಿಮೆ ಜನ ಇದ್ದಾರೆ. ಇಂದಿನ ಜಾಗತೀಕರಣ ಹಿನ್ನೆಲೆಯಲ್ಲಿ ಭಾಷೆಗೆ ಬಹಳ ಪ್ರಾಮುಖ್ಯತೆ ಇದೆ. ಇಬ್ಬರ ನಡುವೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಷ್ಟೇ ಸೀಮಿತವಾಗದೆ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಚಟುವಟಿಕೆಗಳಲ್ಲಿ ಜನರನ್ನು ನೇರ ಪಾಲುದಾರರನ್ನಾಗಿ ಮಾಡಲು ಭಾಷೆಯ ಅಗತ್ಯ ತುಂಬಾ ಇದೆ.

ವಿಶ್ವದ 6 ಸಾವಿರ ಭಾಷೆಗಳಲ್ಲಿ ಯಾವ ಭಾಷೆಗಳು ಹೆಚ್ಚು ಪ್ರಬಲವಾಗಿವೆ? ಒಂದು ವೇಳೆ ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಹೆಜ್ಜೆ ಇಟ್ಟರೆ ಅವರು ಯಾವ ಭಾಷೆ ಕಲಿತರೆ ನಮ್ಮೊಂದಿಗೆ ಸುಲಭವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ? ಯಾವ ಆಧಾರದ ಮೇಲೆ ಪ್ರಬಲ ಭಾಷೆಯೆಂದು ಗುರುತಿಸಬೇಕು? ಜಿಯಾಗ್ರಫಿ, ಅಂದರೆ ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸುವುದು, ಎಕಾನಮಿ, ಕಮ್ಯೂನಿಕೇಷನ್, ನಾಲೆಡ್ಜ್, ಡಿಪ್ಲಮಸಿ ಎಂಬ ಕ್ಯಾಟಗರಿಗಳನ್ನು ಪರಿಗಣಿಸಿ ಅತ್ಯಂತ ಪ್ರಬಲ ಅಥವಾ ಪ್ರಭಾವಿತ 20 ಭಾಷೆಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ.

ಎಲ್ಲರೂ ಅಂದುಕೊಂಡಂತೆ ಇಂಗ್ಲೀಷಿಗೆ ಮೊದಲ ಸ್ಥಾನ ಲಭಿಸಿದೆ. ಆಶ್ಚರ್ಯವೆಂಬಮತೆ ಮ್ಯಾಂಡರಿನ್ ದ್ವಿತೀಯ ಭಾಷೆಯಾಗಿ ಅಯ್ಕೆಯಾಗಿದೆ. ಹಿಂದಿ ಹತ್ತನೆಯ ಭಾಷೆಯಾಗಿ ಆಯ್ಕೆಯಾಗಿದೆ. ಮ್ಯಾಂಡರಿನ್ ನಂತರ ಕ್ರಮವಾಗಿ ಫ್ರೆಂಚ್, ಸ್ಪಾನಿಷ್, ಅರೇಬಿಕ್, ರಷ್ಯನ್, ಜರ್ಮನ್, ಜಪಾನ್, ಪೋರ್ಚುಗೀಸ್ ಭಾಷೆಗಳು ಆಯ್ಕೆಯಾಗಿವೆ. ವಿಶ್ವದಲ್ಲಿ ಆರ್ಥಿಕವಾಗಿ ಬಲಾಡ್ಯವಾಗಿರುವ ಹತ್ತು ದೇಶಗಳಲ್ಲಿ ನಾಲ್ಕು ದೇಶಗಳಲ್ಲಿ ಇಂಗ್ಲೀಷ್ ಅಧಿಕೃತ ಭಾಷೆ. ಅವುಗಳಲ್ಲಿ ಎಂಟು ದೇಶಗಳಲ್ಲಿ ಇಂಗ್ಲೀಷ್ ಚೆನ್ನಾಗಿ ಮಾತನಾಡಬಲ್ಲರು. ಬ್ರಿಟೀಶ್ ಆಡಳಿತದಿಂದ ವಿಶ್ವದ ಹಲವು ದೇಶಗಳಿಗೆ ಇಂಗ್ಲೀಷ್ ಭಾಷೆ ವಿಸ್ತರಿಸಿದೆ. ನಂತರ ಜಾಗತೀಕರಣದ ಫಲವಾಗಿ ಇಂಗ್ಲೀಷ್ ಪ್ರಾಮುಖ್ಯತೆ ಹೆಚ್ಚುತ್ತಾ ಹೋಯಿತು.

ಆಧುನಿಕ ತಂತ್ರಜ್ಞಾನ ಬಂದ ಹಿನ್ನೆಲೆಯಲ್ಲಿ ಭಾಷಾ ಪ್ರಾಮುಖ್ಯತೆಗಳು ಬದಲಾಗುತ್ತಿವೆ. ಯಾವ ಭಾಷೆಯಿಂದ ಯಾವ ಭಾಷೆಗಾದರೂ ಅನುವಾದ ಮಾಡುವ ಸೌಲಭ್ಯ ಸಿಕ್ಕಿರುವುದು ಇದಕ್ಕೆ ಕಾರಣ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು 2050 ರ ವೇಳೆಗೆ ವಿಶ್ವದಲ್ಲಿ ಪ್ರಬಲ ಭಾಷೆಗಳು ಏನಾಗಬಹುದು ಎಂಬ ವಿಷಯದ ಬಗ್ಗೆಯೂ ತಜ್ಞರು ಅಂದಾಜಿಸಿದ್ದಾರೆ. ಇಂಗ್ಲೀಷ್, ಮ್ಯಾಂಡರಿನ್ ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗದೆ ಹೋದರೂ, ಮೂರನೇ ಸ್ಪಾನಿಷ್, 9 ಸ್ಥಾನಕ್ಕೆ ಹಿಂದಿ ತಲುಪುವ ಸಾಧ್ಯತೆಗಳು ಇವೆಯಂತೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!