ಹಾಲಿಗಾಗಿ ಮಗು ಅತ್ತರೆ, ಕತ್ತು ಸೀಳಿ ಕೊಂದಳೇ ತಾಯಿ?

ಮಗು ಅತ್ತಿದ್ದೇ ಮಹಾಪರಾಧವಾಯಿತು ಒಬ್ಬ ಮಹಾತಾಯಿಗೆ. ಹಾಲಿಗಾಗಿ ಅಳುತ್ತಿದ್ದ ಮಗುವಿನ ಕುತ್ತಿಗೆ ಸೀಳಿ ಕೊಂದಿದ್ದಾಳೆ ಪಾಪಿ ತಾಯಿ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.

ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಅನಿತಾಳಿಗೆ ತನ್ನ ಮಗು ಹಾಲಿಗಾಗಿ ಒಂದೇ ಸಮನೆ ಅಳುತ್ತಿರುವುದನ್ನು ಕೇಳಿ ಪಿತ್ತ ನೆತ್ತಿಗೇರಿದೆ. ಕೂಡಲೇ ಕುಡಗೋಲಿನಿಂದ ಮಗುವಿನ ಕತ್ತು ಸೀಳಿ ಕೊಂದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಮಂಡ್ಯದಲ್ಲಿ ಸೋನಿಯಾ ಸಮೋಸಾ, ರಾಹುಲ್ ರಸಗುಲ್ಲಾ ಮಾರಿ ಪ್ರತಿಭಟನೆ

ಘಟನೆ ನಡೆದಾಗ ಮಗು ಮತ್ತು ಮಹಿಳೆ ಇಬ್ಬರೇ ಇದ್ದು, ನೆತ್ತರ ಮಡುವಿನಲ್ಲಿ ಬಿದ್ದದ್ದ ಮಗುವನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Click here here to Download our Android App

Get Latest updates on WhatsApp. Send ‘Subscribe’ to 8550851559