ಒಂದೇ ದಿನದಲ್ಲಿ 1 ಲಕ್ಷ ಮೊಬೈಲ್ ಮಾರಾಟ… ಯಾವುದಿದು?

ಮುಂಬೈ: ಪ್ರಸಿದ್ಧ ಮೊಬೈಲ್ ತಯಾರಿಕಾ ಕಂಪನಿ ಮೊಟರೋಲಾ ತಯಾರಿಸಿರುವ ಹೊಸ ಮಾಡೆಲ್ ಸ್ಮಾರ್ಟ್ ಫೋನ್ “ಮೋಟೋ E4 ಪ್ಲಸ್” ಜುಲೈ 12ರಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಫ್ಲಿಪ್ ಕಾರ್ಟ್ ಮೂಲಕ ಈ ಸ್ಮಾರ್ಟ್ ಫೋನ್ ಮಾರಾಟಕ್ಕೆ ಅವಕಾಶವಿತ್ತು.

ವಿಷಯ ಏನೆಂದರೆ ಕೇವಲ ಒಂದೇ ದಿನದಲ್ಲಿ ಒಂದು ಲಕ್ಷದಷ್ಟು ಈ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿವೆ ಎಂದು ಕಂಪನಿಯು ಪ್ರಕಟಿಸಿದೆ. ಬಿಡುಗಡೆಯಾದ ಮೊದಲ 1 ಗಂಟೆಯಲ್ಲಿ ನಿಮಿಷಕ್ಕೆ ಸುಮಾರು 580 ಫೋನ್ ಗಳಂತೆ ಮಾರಾಟವಾಗಿವೆ ಎಂದು ಈ ಪ್ರಕಟಣೆಯಲ್ಲಿ ತಿಳಿಸಿದೆ.

ಫೋನ್ ವೈಶಿಷ್ಟ್ಯತೆಗಳ ವಿಷಯಕ್ಕೆ ಬಂದರೆ, 5000 mAh ಬ್ಯಾಟರಿ ಸಾಮರ್ಥ್ಯದ ಇದು ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನ ಬಳಸಬಹುದು. ಮಿಡಿಯಾ ಟೆಕ್ ಕ್ವಾಡ್ ಕೋರ್ ಪ್ರೊಸೆಸರ್, 3 ಜಿಬಿ ರ್ಯಾಮ್, 32 ಜಿಬಿ ಇಂಟರ್ನಲ್ ಮೆಮೋರಿ ಹೊಂದಿದೆ. 5.5 ಇಂಚಿನ ಸ್ಕ್ರೀನ್ ಗೆ 2.5 ಡಿ ಕರ್ವ್ಡ್ ಗ್ಲಾಸ್ ಈ ಫೋನ್ ಗೆ ಆಕರ್ಷಣೆ. ಆಂಡ್ರಾಯ್ಡ್ ನೋಗಟ್ 7.1 ನಿಂದ ಇದು ಕಾರ್ಯನಿರ್ವಹಿಸಲಿದೆ. ಸುಮಧುರ ಸಂಗೀತಕ್ಕಾಗಿ ಡಾಲ್ಬೀ ಅಟ್ಮಾಸ್ ಫೀಚರ್ ಅಳವಡಿಸಲಾಗಿದೆ. ಇದರ ಬೆಲೆ ರೂ. 9,999.

7 ತಿಂಗಳಲ್ಲಿ 102 ಉಗ್ರರು ಮಟಾಷ್