ಸಂಜಯ್ ದತ್ ಅವಧಿಪೂರ್ವ ಬಿಡುಗಡೆ, ಸಮರ್ಥಿಸಿಕೊಂಡ ಮಹಾ ಸರ್ಕಾರ |News Mirchi

ಸಂಜಯ್ ದತ್ ಅವಧಿಪೂರ್ವ ಬಿಡುಗಡೆ, ಸಮರ್ಥಿಸಿಕೊಂಡ ಮಹಾ ಸರ್ಕಾರ

1993 ರ ಮುಂಬೈ ಸ್ಪೋಟಗಳಿಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ನಟ ಸಂಜಯ್ ದತ್ ಅವರನ್ನು ಅವಧಿಗಿಂತ ಮುಂಚೆ ಜೈಲಿನಿಂದ ಬಿಡುಗಡೆ ಮಾಡಿದ ತೀರ್ಮಾನವನ್ನು ಮಹಾರಾಷ್ಟ್ರ ಸರ್ಕಾರ ಸಮರ್ಥಿಸಿಕೊಂಡಿದೆ. 8 ತಿಂಗಳು 16 ದಿನಗಳು ಮುಂಚಿತವಾಗಿ ಸಂಜಯ್ ದತ್ ಅವರನ್ನು ಬಿಡುಗಡೆ ಮಾಡಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಸೋಮವಾರ ಜಸ್ಟೀಸ್ ಆರ್.ಎಂ. ಸಾವಂತ್ ಮತ್ತು ಜಸ್ಟೀಸ್ ಸಾಧನಾ ಜಾಧವ್ ಅವರ ನ್ಯಾಯಪೀಠಕ್ಕೆ ಅಫಿಡವಿಟ್ ಸಲ್ಲಿಸಿದ ಮಹಾ ಸರ್ಕಾರ, ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಅಟಾರ್ನಿ ಜನರಲ್ ಎ.ಎ.ಕುಂಭಕೋನಿ ನ್ಯಾಯಪೀಠಕ್ಕೆ ಅಫಿಡವಿಟ್ ಸಲ್ಲಿಸಿದರು. ಸಂಜಯ್ ದತ್ ರವರ ಪ್ರಕರಣ ಮಾಹಾರಾಷ್ಟ್ರ ಕಾರಾಗೃಹ ನಿಯಮಗಳು 1962 ರ ಪ್ರಕಾರ ರೂಲ್ 8 ರ ಅಡಿಯಲ್ಲಿ ಬರುತ್ತದೆ ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ.

ಜೈಲಿನಲ್ಲಿ ಉತ್ತಮ ನಡುವಳಿಕೆ ಆಧಾರದ ಮೇಲೆ ಫೆಬ್ರವರಿ 2016 ರಂದು ಅಂದರೆ ಶಿಕ್ಷೆ ಮುಗಿಯುವುದಕ್ಕೆ 8 ತಿಂಗಳು ಮುಂಚಿತವಾಗಿ ಸಂಜಯ್ ದತ್ ಅವರನ್ನು ಪುಣೆಯ ಯರವಾಡಾ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು

Loading...
loading...
error: Content is protected !!