ಆ ಇಬ್ಬರೇ ನಾವು ಸೋಲಲು ಕಾರಣ – News Mirchi

ಆ ಇಬ್ಬರೇ ನಾವು ಸೋಲಲು ಕಾರಣ

ಹಾರ್ಧಿಕ್ ಪಾಂಡ್ಯಾ ಮತ್ತು ಎಂಎಸ್ ಧೋನಿ ಅವರ ಜೊತೆಯಾಟವೇ ನಾವು ಪಂದ್ಯ ಸೋಲುವಂತೆ ಮಾಡಿತು ಎಂದು ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 26 ರನ್ ಗಳ ಅಂತರದಿಂದ ಭಾರತದ ವಿರುದ್ಧ ಸೋತ ನಂತರ ಮಾಧ್ಯಮಗಳೊಂದಿಗೆ ಸ್ಟೀಮ್ ಸ್ಮಿತ್ ಮಾತನಾಡಿದರು.

“ನಾವು ಹೊಸ ಚೆಂಡಿನೊಂದಿಗೆ ಉತ್ತಮವಾಗಿ ಬೌಲಿಂಗ್ ಮಾಡಿದೆವು. ಆದರೆ ಭಾರತೀಯ ಆಟಗಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಎಂ.ಎಸ್ ಧೋನಿ ಮತ್ತು ಹಾರ್ಧಿಕ್ ಪಾಂಡ್ಯಾ ಉತ್ತಮ ಪ್ರದರ್ಶನ ನೀಡಿದ್ದಾರೆ. ನಾವು ಉತ್ತಮ ಆರಂಭ ಪಡೆದರೂ ನಾವು ಅದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು” ಎಂದು ಸ್ಮಿತ್ ಹೇಳಿದರು.

ಮಳೆಯೂ ಕೂಡಾ ಪಂದ್ಯದ ಮೇಲೆ ಪ್ರಭಾವ ಬೀರಿತು ಎಂದಿರುವ ಸ್ಮಿತ್, ಬ್ಯಾಟಿಂಗ್ ಮಿಡಲ್ ಆರ್ಡರ್ ನಲ್ಲಿ ನಾವು ಬೇಗ ವಿಕೆಟ್ ಕಳೆದುಕೊಂಡಿದ್ದು ದುಬಾರಿಯಾಯಿತು. ಆದರೂ ನಾವು ಭಾರತೀಯ ಆಟಗಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ದೂರುವುದಕ್ಕೇನೂ ಇಲ್ಲ. ಭಾರತವು ನಮಗಿಂತ ಉತ್ತಮವಾಗಿ ಆಡಿತು, ಭಾರತೀಯ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರು ಎಂದು ಸ್ಮಿತ್ ಹೇಳಿದರು

[ಇದನ್ನೂ ಓದಿ: ಬೇಕೆಂದೇ ಆತನನ್ನು ಟಾರ್ಗೆಟ್ ಮಾಡಿದೆವು : ಹಾರ್ಧಿಕ್ ಪಾಂಡ್ಯಾ]

ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 26 ರನ್ ಗಳಿಂದ ಸೋಲಿಸಿತು (ಡಕ್ವರ್ತ್ ಲೂಯಿಸ್ ಪ್ರಕಾರ). 50 ಓವರ್ ಗಳಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು. ಹಾರ್ಧಿಕ್ ಪಾಂಡ್ಯಾ (66 ಎಸೆತಗಳಲ್ಲಿ 83 ರನ್, 5 ಫೋರ್, 5 ಸಿಕ್ಸರ್) ಮತ್ತು ಎಂಎಸ್ ಧೋನಿ (88 ಎಸೆತಗಳಲ್ಲಿ 79 ರನ್, 4 ಬೌಂಡರಿಗಳು ಮತ್ತು 2 ಸಿಕ್ಸರ್) ಇನಿಂಗ್ಸ್ ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರೀ ಮಳೆಯ ಕಾರಣ ಪಂದ್ಯವನ್ನು ದೀರ್ಘಕಾಲ ನಿಲ್ಲಿಸಲಾಯಿತು. ಮಳೆ ನಿಂತ ನಂತರ ಗೆಲ್ಲಲು ಆಸ್ಟ್ರೇಲಿಯಾಗೆ 21 ಓವರ್ ಗಳಲ್ಲಿ 164 ರನ್ ಗುರಿ ನೀಡಲಾಯಿತು. ಆಸ್ಟ್ರೇಲಿಯಾ 21 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮ್ಯಾಕ್ಸ್ ವೆಲ್ (18 ಎಸೆತಗಳಲ್ಲಿ 39 ರನ್, 3 ಬೌಂಡರಿ ಮತ್ತು 4 ಸಿಕ್ಸರ್) ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸದ ಆಟಗಾರ , ಚಹಾಲ್ 3 ವಿಕೆಟ್ ಗಳನ್ನು ಪಡೆದರು. ಕೊಲ್ಕತ್ತಾದಲ್ಲಿ ಗುರುವಾರ ಎರಡನೇ ಏಕದಿನ ಪಂದ್ಯ ನಡೆಯಲಿದೆ.

Get Latest updates on WhatsApp. Send ‘Add Me’ to 8550851559

Loading...