ಮೋದಿ ಕಿವಿಯಲ್ಲಿ ಮುಲಾಯಂ ಹೇಳಿದ ರಹಸ್ಯವೇನು? |News Mirchi

ಮೋದಿ ಕಿವಿಯಲ್ಲಿ ಮುಲಾಯಂ ಹೇಳಿದ ರಹಸ್ಯವೇನು?

ಉತ್ತರಪ್ರದೇಶ ಚುನಾವಣೆ ಸಮಯದಲ್ಲಿ ಒಬ್ಬರನ್ನೊಬ್ಬರು ಬಯ್ದಾಡಿದರು. ಅಖಿಲೇಶ್ ಸರ್ಕಾರ ಭ್ರಷ್ಟಾಚಾರದಿಂದ ತುಂಬಿದೆ ಎಂದು ಮೋದಿ ಆರೋಪಿಸಿದರೆ, ಮಾಜಿ ಸಿಎಂ ಅಖಿಲೇಶ್ ಸಹಾ ಮೋದಿ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಆದರೆ ಅವೆಲ್ಲವೂ ಚುನಾವಣೆವರೆಗೂ ಅಷ್ಟೇ ಎಂಬುದನ್ನು ಪ್ರೂವ್ ಮಾಡಿಬಿಟ್ಟರು. ಇಂದು ಹೊಸ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸಮಾರಂಭದಲ್ಲಿ ಮೋದಿ, ಅಖಿಲೇಶ್ ಮತ್ತು ಮುಲಾಯಂ ಪರಸ್ಪರ ಮಾತನಾಡಿಕೊಂಡರು. ನಗುತ್ತಾ ಕೈಕುಲುಕಿದರು.

ಸಮಾರಂಭ ಮುಗಿದ ನಂತರ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಮಾತನಾಡಿಸಿದರು. ಮುಲಾಯಂ ಸಿಂಗ್ ಒಂದು ಹೆಜ್ಜೆ ಮುಂದೆ ಹೋಗಿ ಮೋದಿಯವರ ಕಿವಿಯಲ್ಲೇ ಏನೋ ಪಿಸುಗುಟ್ಟಿದರು. ಮುಲಾಯಂ ಮಾತಿಗೆ ಮೋದಿ ಸಹಾ ಮುಗುಳ್ನಕ್ಕರು. ಮೋದಿ ಕಿವಿಯಲ್ಲಿ ಮುಲಾಯಂ‌ ಹೇಳಿದ್ದೇನು ಎಂಬುದು ಮಾತ್ರ ಎಲ್ಲರಲ್ಲೂ ಕುತೂಹಲ ಮೂಡಿಸಿತು.

Loading...
loading...
error: Content is protected !!