ಅಖಿಲೇಶ್ ವಿರುದ್ಧ ಸ್ಪರ್ಧಿಸುತ್ತೇನೆ: ಮುಲಾಯಂ – News Mirchi

ಅಖಿಲೇಶ್ ವಿರುದ್ಧ ಸ್ಪರ್ಧಿಸುತ್ತೇನೆ: ಮುಲಾಯಂ

ಇದುವರೆಗೂ ಮಾತಿಗೆ ಸೀಮಿತವಾಗಿದ್ದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಯುದ್ಧ ಈಗ ಚುನಾವಣೆಯಲ್ಲಿ ಒಬ್ಬರ ವಿರುದ್ಧ ಮತ್ತೊಬ್ಬರು ಸ್ಪರ್ಧಿಸುವ ಮಟ್ಟಕ್ಕೆ ಹೋಗಿದೆ. ಅಗತ್ಯ ಬಿದ್ದರೆ ತಾನೇ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ, ಅದೂ ತನ್ನ ಮಗ ಅಖಿಲೇಶ್ ವಿರುದ್ಧವೇ ಸ್ಪರ್ಧಿಸುತ್ತೇನೆ ಎಂದು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.

ಮುಸ್ಲಿಮರನ್ನು ಅಖಿಲೇಶ್ ಯಾದವ್ ರೊಚ್ಚಿಗೆಬ್ಬಿಸುತ್ತಿದ್ದಾರೆ ಎಂದು ಮುಲಾಯಂ ಆರೋಪಿಸಿದ್ದಾರೆ. ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ ಯಾರಿಗೆ ಸೇರಬೇಕು ಎಂದು ಇಂದು ಚುನಾವಣಾ ಆಯೋಗ ತೀರ್ಮಾನಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಲಾಯಂ ತನ್ನ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದರು.

ಪಕ್ಷದ ಚಿಹ್ನೆಯನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ ಮುಲಾಯಂ, ತನ್ನ ಮಾತು ಕೇಳದಿದ್ದರೆ ನೇರವಾಗಿ ಅಖಿಲೇಶ್ ವಿರುದ್ಧ ಸ್ಪರ್ಧಿಸುತ್ತೇನೆ ಎಂದರು. ಮೂರು ಬಾರಿ ಅಖಿಲೇಶ್ ನನ್ನು ಮಾತುಕತೆಗೆ ಕರೆದಿದ್ದೆ, ಆದರೆ ಆತ ಕೇವಲ ಒಂದು ನಿಮಿಷ ಇದ್ದು, ತಾನು ಮಾತಾಡುವ ಮುಂಚೆಯೇ ಅಲ್ಲಿಂದ ಹೊರಟು ಹೋದರು ಎಂದು ಆರೋಪಿಸಿದ್ದಾರೆ. ಚಿಹ್ನೆಯ ವಿಷಯದಲ್ಲಿ ಚುನಾವಣಾ ಆಯೋಗ ಯಾವ ತೀರ್ಮಾನ ಕೈಗೊಂಡರೂ ಅದನ್ನು ಅಂಗೀಕರಿಸುವುದಾಗಿ ಮುಲಾಯಂ ಹೇಳಿದರು.

ಕಾಂಗ್ರೆಸ್, ಆರ್.ಎಲ್.ಡಿ ಪಕ್ಷಗಳೊಂದಿಗೆ ಸೇರಿ ಚುನಾವಣೆ ಎದುರುಸಲು ಅಖಿಲೇಶ್ ಪ್ರಯತ್ನಿಸುತ್ತಿದ್ದರೆ, ಮುಲಾಯಂ ಸಿಂಗ್ ಮಾತ್ರ ಅಖಿಲೇಶ್ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗೆ ಆರೋಪಿಸುವ ಮೂಲಕ ಅಖಿಲೇಶ್ ಗೆ ಮುಸ್ಲಿಮರ ಬೆಂಬಲ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.

Loading...

Leave a Reply

Your email address will not be published.