ಮೋದಿಯ ಅವಹೇಳನ ಮಾಡಿ ದರ್ಪ ತೋರಿದ ತನ್ಮಯ್ ಭಟ್, ಕೇಸು ದಾಖಲು – News Mirchi

ಮೋದಿಯ ಅವಹೇಳನ ಮಾಡಿ ದರ್ಪ ತೋರಿದ ತನ್ಮಯ್ ಭಟ್, ಕೇಸು ದಾಖಲು

ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರನ್ನು ಅವಹೇಳನ ಮಾಡಿ ಸಾಮಾಜಿಕ ತಾಣದಲ್ಲಿ ಹಾಸ್ಯದ ಗ್ರೂಪ್ “ಆಲ್ ಇಂಡಿಯಾ ಬ್ಯಾಕ್ಚೋಡ್” ಮಾಡಿದ ಪೋಸ್ಟ್ ಗೆ ಸಂಬಂಧಿಸಿದಂತೆ ಮುಂಬೈ ಸೈಬರ್ ಕ್ರೈಂ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ. ಮೋದಿಯವರಂತೆ ಕಾಣುವ ವ್ಯಕ್ತಿಯೊಬ್ಬರ ಚಿತ್ರ, ಅದರ ಪಕ್ಕದಲ್ಲೇ ಮೋದಿಯವರನ್ನು ಅವಹೇಳನ ಮಾಡಿ ಮೋದಿಯವರ ಫೋಟೋ ಮಾರ್ಫಿಂಗ್ ಮಾಡಿರುವ ಫೋಟೋ ಹಾಕಿ ಪೋಸ್ಟ್ ಮಾಡಲಾಗಿತ್ತು.

ನರೇಂದ್ರ ಮೋದಿಯವರನ್ನು ಹೋಲುವ ವ್ಯಕ್ತಿಯೊಬ್ಬ ಬ್ಯಾಗ್ ನೇತುಹಾಕಿಕೊಂಡು, ರೈಲ್ವೇ ಪ್ಲಾಟ್ ಫಾರ್ಮ್ ಮೇಲೆ ನಿಂತು ಮೊಬೈಲ್ ನೋಡುತ್ತಾ ರೈಲಿಗೆ ಕಾಯುತ್ತಿರುವಂತೆ ಕಾಮಿಡಿ ಗ್ರೂಪ್ ಎಐಬಿ ತನ್ನ ಅಧಿಕೃತ ಗ್ರೂಪ್ ನಲ್ಲಿ ಪೋಸ್ಟ್ ಮಾಡಿತ್ತು.

ಭಾರತದ ಪ್ರಧಾನಮಂತ್ರಿಗೆ ಅವಮಾನ ಮಾಡಿದ್ದು, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ಪೋಸ್ಟ್ ಮಾಡಿದವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಎಐಬಿ ಗ್ರೂಪ್ ನ ಮುಖ್ಯಸ್ಥ ತನ್ಮಯ್ ಭಟ್ ಸಾಮಾಜಿಕ ತಾಣದಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದು, ತಾನು ಮಾಡಿದ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಾ ಏನು ಮಾಡ್ತೀರೋ ಮಾಡಿ ಎಂಬಂತೆ ಸವಾಲೆಸಿದಿದ್ದಾರೆ.

ನಾವು ಪೋಸ್ಟ್ ಮಾಡ್ತೀವಿ, ಅಗತ್ಯ ಬಿದ್ದರೆ ಅದನ್ನು ಡಿಲೀಟ್ ಮಾಡುತ್ತೇವೆ, ಮತ್ತೆ ಪೋಸ್ಟ್ ಮಾಡುತ್ತೇವೆ, ನಮ್ಮನ್ನು ಯಾರೂ ಏನೂ ಮಾಡಲಾರರು ಎಂಬಂತೆ ಪೋಸ್ಟ್ ಮಾಡಿದ್ದಾರೆ. ಈ ಹಿಂದೆಯೂ ಇದೇ ಗ್ರೂಪ್ ನಿರ್ವಾಹಕರು ಕ್ರಿಕೆಟ್ ಆಟಗಾರ ಸಚಿನ್ ಮತ್ತು ಲತಾ ಮಂಗೇಷ್ಕರ್ ಮುಂತಾದವರನ್ನು ಅವಹೇಳನ ಮಾಡಿ ಪೋಸ್ಟ್ ಹಾಕಿದ್ದರು.

Loading...