50 ನೇ ಟೆಸ್ಟ್ ಪಂದ್ಯದಲ್ಲಿ ವಿಜಯ್ 15 ನೇ ಅರ್ಧಶತಕ – News Mirchi

50 ನೇ ಟೆಸ್ಟ್ ಪಂದ್ಯದಲ್ಲಿ ವಿಜಯ್ 15 ನೇ ಅರ್ಧಶತಕ

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರ ಮುರಳಿ ವಿಜಯ್ ಅರ್ಧ ಶತಕ ಗಳಿಸಿದ್ದಾರೆ. ಪುಣೆ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ವಿಜಯ್ ಗಳಿಸಿದ್ದು ಕೇವಲ 12 ರನ್ ಮಾತ್ರ. ಗಾಯದ ಕಾರಣ ಬೆಂಗಳೂರು ಪಂದ್ಯದಿಂದ ವಿಜಯ್ ದೂರವುಳಿದಿದ್ದರು. ಗಾಯದಿಂದ ಚೇತರಿಸಿಕೊಂಡ ವಿಜಯ್ ಮೂರನೇ ಪಂದ್ಯದಲ್ಲಿ ಆಡಲು ಅವಕಾಶ ಗಿಟ್ಟಿಸಿಕೊಂಡು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯ ಆತನಿಗೆ 50 ನೇ ಪಂದ್ಯವಾಗಿರುವುದು ವಿಶೇಷ. ಓಪನರ್ ಆಗಿ ಕೆ.ಎಲ್.ರಾಹುಲ್ ಜೊತೆಗೂಡಿ ಕಣಕ್ಕಿಳಿದ ವಿಜಯ್, ಮೂರನೆಯ ದಿನ ಮೊದಲ ಸೆಷನ್ಸ್ ನಲ್ಲಿ 50 ರನ್ ಪೂರ್ಣಗೊಳಿಸಿ ಟೆಸ್ಟ್ ಕೆರೀರ್ ನಲ್ಲಿ 15 ನೇ ಅರ್ಧಶತಕ ದಾಖಲಿಸಿದರು.

52 ಓವರ್ ಪೂರ್ಣ ಗೊಳ್ಳುವ ವೇಳೆಗೆ ಭಾರತ ಒಂದು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು. ಸದ್ಯ ಮುರಳಿ ವಿಜಯ್ 50, ಪೂಜಾರಾ 15 ರನ್ ಗಳೊಂದಿಗೆ ಆಡುತ್ತಿದ್ದಾರೆ.

Loading...

Leave a Reply

Your email address will not be published.