ಮುಸ್ಲಿಂ ಬಿಜೆಪಿ ಕಾರ್ಯಕರ್ತನಿಗೆ ಭಯೋತ್ಪಾದಕರಿಂದ ಹಲ್ಲೆ, ಬೆದರಿಕೆ |News Mirchi

ಮುಸ್ಲಿಂ ಬಿಜೆಪಿ ಕಾರ್ಯಕರ್ತನಿಗೆ ಭಯೋತ್ಪಾದಕರಿಂದ ಹಲ್ಲೆ, ಬೆದರಿಕೆ

ಬಿಜೆಪಿಯೊಂದಿಗೆ ಗುರುತಿಸಿಕೊಂಡ ಕಾರಣಕ್ಕಾಗಿ ಜಮ್ಮು ಕಾಶ್ಮೀರದಲ್ಲಿ ವ್ಯಕ್ತಿಯೊಬ್ಬನನ್ನು ಭಯೋತ್ಪಾದಕರು ಹಲ್ಲೆ ನಡೆಸಿ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಬಿಜೆಪಿ ಕಾರ್ಯಕರ್ತರ ಮೊಹಮದ್ ಮಕ್ಬೂಲ್ ಮೇಲೆ ಭಯೋತ್ಪಾದಕರು ಹಲ್ಲೆ ನಡೆಸಿರುವ ವೀಡಿಯೋ ಇದೀಗ ಬಹಿರಂಗಗೊಂಡಿದೆ.

ಸೋಪಿಯಾನ್ ಜಿಲ್ಲೆಯ ನಡೋರಾ ಮೂಲದ ಬಿಜೆಪಿ ಕಾರ್ಯಕರ್ತ ಮಕ್ಬೂಲ್ ಭಟ್ ನ ಬಟ್ಟೆ ಹರಿದು, ದೈಹಿಕ ಹಲ್ಲೆ ನಡೆಸಿ ಭಾರತೀಯ ಸೇನೆಗೆ ಬೆಂಬಲಿಸಿದರೆ ಅಥವಾ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

  • No items.

ಹಲ್ಲೆ ನಡೆಸಿ ಬಿಡುಗಡೆ ಮಾಡುವ ಮುನ್ನ ಮಕ್ಬೂಲ್ ಗೆ ಎಚ್ಚರಿಕೆಯನ್ನೂ ನೀಡಿರುವ ಭಯೋತ್ಪಾದಕರು, ‘ಮತ್ತೆಂದೂ ಬಿಜೆಪಿ ಮತ್ತು ಭಾರತೀಯ ಸೇನೆಯೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಎಂಬ ಷರತ್ತಿನ ಮೇಲೆ ಈ ಬಾರಿ ನಿನ್ನನ್ನು ಬಿಟ್ಟು ಬಿಡುತ್ತಿದ್ದೇವೆ, ಯಾರಾದರೂ ಹಾಗೆ ಮಾಡುವಂತೆ ಒತ್ತಾಯಿಸಿದರೆ ಹೋಗಬೇಡ, ಮುಜಾಹಿದೀನ್ ಗಳು ನನ್ನ ಸಹೋದರರೆಂದು ಹೇಳು’ ಎಂದು ಹೆದರಿಸಿದ್ದಾರೆ.


ಭಯೋತ್ಪಾದಕರ ಕಿರುಕುಳಕ್ಕೆ ಹೆದರಿದ ಮಕ್ಬೂಲ್, ತನ್ನ ಕುಟುಂಬವನ್ನು ಪೋಷಿಸಲು ಇರುವುದು ನಾನೊಬ್ಬನೇ ಎಂದು ತನ್ನನ್ನು ಬಿಟ್ಟುಬಿಡುವಂತೆ ಬೇಡಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!